ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು (ರಿ) ವತಿಯಿಂದ ‘ಕೆ.ಡಿ.ಕೆ. ಕ್ರಿಕೆಟ್ ಕಪ್-2022’ ಎ.23 ಮತ್ತು 24 ರಂದು ಬೆಂಗಳೂರಿನ ಹೆಚ್.ಎಂ.ಟಿ. ಗ್ರೌಂಡ್ ನಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ಹಲವಾರು ತಂಡಗಳು ಭಾಗವಹಿಸಿದ್ದು, ಕೆ.ಡಿ.ಕೆ. ಸಿಝ್ಲಿರ್ ಮತ್ತು ಯುನೈಟೆಡ್ ಬ್ರದರ್ಸ್ ತಂಡ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಕೆ.ಡಿ.ಕೆ. ಸಿಝ್ಲಿರ್ಸ್ ಪ್ರಥಮ ಬಹುಮಾನವನ್ನು ಪಡೆದರು.
ಲೋಕೇಶ್ ಗೌಡ ಬೆಸ್ಟ್ ಫೀಲ್ಡರ್ ಮತ್ತು ಲೋಹಿತ್ ಗೌಡ ಮ್ಯಾನ್ ಆಫ್ ದಿ ಮ್ಯಾಚ್ ಬಹುಮಾನವನ್ನು ತಮ್ಮದಾಗಿಸಿಕೊಂಡರು.