ಪುತ್ತೂರು: ಹಳೆ ಪ್ರಕರಣಯೊಂದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಕಬೀರ್ ಬಂಧಿತ ಆರೋಪಿ.

ಪುತ್ತೂರು ಗ್ರಾಮಾಂತರ ಠಾಣಾ ಉಪನೀರಿಕ್ಷಕ ಉದಯ ರವಿ ಮತ್ತು ಅಮಿನ್ ಸಾಬ್ ಅತ್ತಾರ್ ರವರ ಸಲಹೆಯಂತೆ ಪುತ್ತೂರು ಸಿಬ್ಬಂದಿಗಳಾದ ಎಚ್ ಸಿ ಧರ್ಮಪಾಲ, ಕೃಷ್ಣಪ್ಪ ಶಿವಾನಂದ ಕೆ, ಗಿರೀಶ್ ರವರು ತಲೆ ಮರೆಸಿಕೊಂಡಿರುವ ವಾರಂಟ್ ಆರೋಪಿಯನ್ನು ಕಾಸರಗೋಡು ತಾಲೂಕಿನ ಚಟ್ಟಂಗಲ್ ಅಯ್ಯಪ್ಪ ಭಜನಾ ಮಂದಿರದ ಬಳಿಯ ಮನೆಯಿಂದ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಯ ಮೇಲೆ ಪುತ್ತೂರು ನಗರ ಠಾಣೆ, ಸುಳ್ಯಮಡಿಕೇರಿ, ಕೇರಳ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿದೆ ಎಂದು ತಿಳಿದು ಬಂದಿದೆ.