ಪುತ್ತೂರು: ವ್ಯಕ್ತಿಯೋರ್ವರು ತರಕಾರಿ ತರಲು ಪೇಟೆ ತೆರಳಿದ ವೇಳೆ ರಸ್ತೆಯಲ್ಲಿ ವಾಹನ ಅಡ್ಡಗಟ್ಟಿ ಅನ್ಯಕೋಮಿನ ಯುವಕರು ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಘಟನೆ ಮುಕ್ವೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನರಿಮೊಗರು ಗ್ರಾಮದ ಎಲಿಕಾ ನಿವಾಸಿ ಮೋನಪ್ಪ ಗೌಡ ಎಂಬವರು ಆಸೀಫ್, ಸಿರಾಜ್, ಝೀಯಾಲ್ ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಮೋನಪ್ಪ ಗೌಡ ರವರು ಮುಕ್ವೆ ಗೆ ತರಕಾರಿ ತರಲು ಓಮ್ನಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮುಕ್ವೆ ಜಂಕ್ಷನ್ ಬಳಿ ತಲುಪಿದಾಗ ಆಕ್ಟಿವಾ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಅದರ ಬಳಿ 5,6 ಜನ ಯುವಕರು ನಿಂತುಕೊಂಡು ಮಾತನಾಡುತ್ತಿದ್ದು, ಆ ಸಮಯ ಯುವಕರು ರಸ್ತೆಯಲ್ಲಿ ಇದ್ದುದನ್ನು ಕೊಂಡ ಮೋನಪ್ಪ ಗೌಡ ರವರು ಹಾರ್ನ್ ಹಾಕಿದ್ದು, ಆಗ ಯುವಕರು ಅಲ್ಲಿಂದ ತೆರಳದೆ ಇದ್ದಾಗ ಮೋನಪ್ಪ ಗೌಡ ರವರು ಕಾರನ್ನು ಚಲಾಯಿಸಿಕೊಂಡು ಹೋದಾಗ ಅವರೆಲ್ಲರೂ ಮೋಹನ ಗೌಡ ರವರ ಓಮ್ನಿ ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಏನು ನೀನು ನಮ್ಮನ್ನು ವಾಹನದ ಅಡಿಗೆ ಹಾಕುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಕಾರನ್ನು ಸುಟ್ಟು ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:28/2022 ಕಲಂ: 143,147,341,504,323 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.