ಪುತ್ತೂರು: ರಾಜಕೀಯವೆಂಬ ಚದುರಂಗದಾಟದಲ್ಲಿ ಇಂದು ಒಂದು ಪಕ್ಷದಲ್ಲಿರುವವರು ನಾಳೆ ಯಾವ ಪಕ್ಷದಲ್ಲಿರುತ್ತಾರೆ ವೆಂಬುದು ಬಹಳ ಕೂತೂಹಲಕಾರಿ ಸಂಗತಿಯಾಗಿದೆ.
ಹಾಗೆಯೇ ಪುತ್ತೂರಿನ ರಾಜಕೀಯ ಪಾಳಯದಲ್ಲಿ ಕೆಲ ವಿಷಯಗಳು ಹರಿದಾಡುತ್ತಿದ್ದು, ಕಾಂಗ್ರೆಸ್ ನ ಪ್ರಭಾವಿ ಮುಖಂಡರುಗಳು ಮೇ.11 ರಂದು(ನಾಳೆ) ಬಿಜೆಪಿ ಸೇರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಹಲವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗೆಗಿನ ಸಂಪೂರ್ಣ ಚಿತ್ರಣ ನಾಳೆಯೇ ತಿಳಿಯಬೇಕಿದೆ.