ಕೊಲ್ಲೂರು: ಕೋವಿಡ್ ನಿರ್ಬಂಧಗಳ ಸಡಿಲಿಕೆಯ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಭಕ್ತರ ಸಂಖ್ಯೆ ಏರಿಕೆ ಕಾಣುತ್ತಿದೆ.
ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು, ದಾಖಲೆಯ 1,53,41,923 ರೂ. ಸಂಗ್ರಹವಾಗಿದೆ. 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ.

ಕಳೆದ ಜನವರಿಯಿಂದ ಪ್ರತೀದಿನ ಕನಿಷ್ಠ 10 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ದೇಗುಲದಲ್ಲಿ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದ ಹಣ ಸಂಗ್ರಹವಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ನಡೆಯುತ್ತಿದ್ದು, ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಸಂಗ್ರಹವಾಗಿತ್ತು.