ಬೆಳ್ತಂಗಡಿ: ಕೊಕ್ಕಡದಲ್ಲಿ ಬಾಡಿಗೆ ಮಾಡುವ ವಿಚಾರವಾಗಿ ರಿಕ್ಷಾ ಚಾಲಕನಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಕ್ಕಡದ ರಿಕ್ಷಾ ಪಾರ್ಕ್‌ನಲ್ಲಿ ಚಾಲಕನಾಗಿರುವ ರಮೇಶ್ ರವರು ತನ್ನ ರಿಕ್ಷಾದಲ್ಲಿ ಪ್ರಯಾಣಿಕರೊಂದಿಗೆ ಬಾಡಿಗೆ ಹೊರಟಾಗ ಮತ್ತೋರ್ವ ರಿಕ್ಷಾ ಚಾಲಕ ದಿನೇಶ್ ಎಂಬಾತ ತನ್ನ ಆಟೋ ರಿಕ್ಷಾವನ್ನು ಈತನ ರಿಕ್ಷಾಕ್ಕೆ ಅಡ್ಡವಾಗಿ ನಿಲ್ಲಿಸಿ ರಮೇಶ್ ರನ್ನು ರಿಕ್ಷಾದಿಂದ ಹೊರಗೆಳೆದು ಜಾತಿನಿಂದನೆ ಮಾಡಿ ಹಲ್ಲೆ ನಡೆಸಿ ರಿಕ್ಷಾದಲ್ಲಿದ್ದ ಪ್ರಯಾಣಿಕರನ್ನು ಅದರಿಂದ ಇಳಿಸಿ ತನ್ನ ರಿಕ್ಷಾದಲ್ಲಿ ಕರೆದೊಯ್ದಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ.
ಗಾಯಗೊಂಡಿರುವ ರಮೇಶ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ .ಕ್ರ 37-2022 ಕಲಂ : 341, 323 ಐ ಪಿ ಸಿ ಮತ್ತು 3 (1) (r) (s), 3(2) (va) ಎಸ್ ಸಿ ಎಸ್ ಟಿ ಆಕ್ಟ್ 2015 ರಂತೆ ಪ್ರಕರಣ ದಾಖಲಾಗಿದೆ.