ವಿಟ್ಲ: ರಾಜ್ಯಾದ್ಯಂತ ಎರಡು-ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಈ ಮಳೆಯೂ ಹಲವು ಕಡೆಗಳಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಅದೇ ರೀತಿ ಮಂಗಳೂರು- ವಿಟ್ಲ ರಸ್ತೆಯ ಕೆಲಿಂಜ ಬೆಂಜಂತ್ತಿಮಾರ್ ಬಳಿ ಮರ ಬಿದ್ದ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.

ಭಾರೀ ಗಾಳಿ ಮಳೆಗೆ ಮಂಗಳೂರು- ವಿಟ್ಲ ರಸ್ತೆಯ ಕೆಲಿಂಜ ಬೆಂಜಂತ್ತಿಮಾರ್ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಈ ಹಿನ್ನೆಲೆ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.

ಮರದ ಜೊತೆಗೆ ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸ್ಥಳಾಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ತೆರವು ಕಾರ್ಯಾಚರಣೆಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
