ಪುತ್ತೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಅಜಯ್ ಶರ್ಮ ಆತ್ಮೀಯ ಕಶ್ಯಪ್, ಅಭಿಜ್ಞಾ ರನ್ನು ಶಾಸಕ ಸಂಜೀವ ಮಠಂದೂರು ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿಗಳು ರಾಜ್ಯದಲ್ಲಿ ಟಾಪ್ ಸ್ಥಾನವನ್ನು ಪಡೆದಿದ್ದಾರೆ.
ಆತ್ಮೀಯಾ ಎಂ.ಕಶ್ಯಪ್ (ಡಾ. ಮೋಹನ್. ಜಿ.ಎಸ್ ಮತ್ತು ಸೌಖ್ಯ. ಎಂ. ಎಸ್ ಇವರ ಪುತ್ರ ), ಅಭಯ್ ಶರ್ಮಾ ಕೆ. (ಗಿರೀಶಂಕರ್. ಕೆ ಮತ್ತು ವಿದ್ಯಾ. ಜಿ. ಭಟ್ ಇವರ ಪುತ್ರ), ಹಾಗೂ ಅಭಿಜ್ಞಾ ಆರ್. ಡಾ.ರಾಜೇಶ್. ಎಂ. ಮತ್ತು ಛಾಯಾ ರಾಜೇಶ್ ಇವರ ಪುತ್ರಿಯಾಗಿದ್ದಾರೆ.