ಪುತ್ತೂರು: ಕಾಂಗ್ರೆಸ್ ಐಟಿ ಸೆಲ್ ಕಾಯದರ್ಶಿ ಶೈಲಜಾ ಅಮರನಾಥರವರ ಪುತ್ತೂರು ಬಪ್ಪಳಿಗೆ ಮನೆಗೆ ಯುವಕರ ತಂಡ ದಾಳಿ ನಡೆಸಿರುವ ಘಟನೆ ಜೂ. 18 ರಂದು ನಡೆದಿದೆ.
ಶೈಲಜಾ ಅಮರನಾಥರವರು ಸಾಮಾಜಿಕ ಜಾಲತಾಣವಾದ ಕ್ಲಬ್ ಹೌಸ್ ಮೂಲಕ ನಡೆದ ಚರ್ಚಾಕೂಟದಲ್ಲಿ ಶ್ರೀರಾಮಚಂದ್ರ, ಸೀತಾಮಾತೆ ಮತ್ತು ಹನುಮಂತ ದೇವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷದ್, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದರ ಬೆನ್ನಲ್ಲಿಯೇ ಶೈಲಜಾ ಅಮರನಾಥರವರು ಮನೆಯ ಅಂಗಳಕ್ಕೆ ಬನದ ಯುವಕರ ತಂಡ ಮನೆಗೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು, ಕಪ್ಪು ಮಸಿ ಎರಚಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾಯದರ್ಶಿಯೂ ಆಗಿರುವ ಶೈಲಜಾ ಅಮರನಾಥರವರು ಮಾಹಿತಿ ನೀಡಿದ ಕೂಡಲೇ ಪೊಲೀಸರು ಶೈಲಜಾರವರ ಮನೆಗೆ ಭೇಟಿ ನೀಡಿದ್ದಾರೆ.