ಪುತ್ತೂರು: ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಕುಂದಾಪುರ ಮೂಲದ ಹಿಂದೂ ಯುವತಿ ಹಾಗೂ ಕೋಟೇಶ್ವರದ ಮುಸ್ಲಿಂ ಹುಡುಗ ಜೊತೆಯಾಗಿ ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ. ಮುಸ್ಲಿಂ ಯುವಕನ ಹೆಸರು ಅಮೀರ್ ಎಂದು ತಿಳಿದು ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅನ್ಯಕೋಮಿನ ಯುವಕನನ್ನು ತಡೆದು ವಿಚಾರಿಸಿದ್ದು, ಹಿಂದೂ ಯುವತಿಗೆ ಪುತ್ತೂರಿನಲ್ಲಿ ಮಾರ್ಕೆಟಿಂಗ್ ಕೆಲಸ ಕೊಡಿಸುವ ಆಮಿಷ ತೋರಿಸಿ ಈತ ಲವ್ ಜಿಹಾದ್‌ಗೆ ಯತ್ನಿಸಿದ್ದಾನೆ. ಹಲವು ಕಡೆಗಳಲ್ಲಿ ಇವರಿಬ್ಬರು ಸುತ್ತಾಡಿಕೊಂಡಿದ್ದರು ಎನ್ನಲಾಗಿದೆ.
ಇವರಿಬ್ಬರ ಬಗ್ಗೆ ತಿಳಿದಿದ್ದ ಕುಂದಾಪುರದ ಹಿಂದೂ ಸಂಘಟನೆಗಳು ಪುತ್ತೂರಿನ ಹಿಂದೂ ಸಂಘಟನೆಯವರಿಗೆ ಮಾಹಿತಿಯನ್ನು ನೀಡಿದ್ದು, ಇದೀಗ ಇವರಿಬ್ಬರನ್ನು ಹಿಂದೂ ಕಾರ್ಯಕರ್ತರು ಪುತ್ತೂರು ಪೊಲೀಸರಿಗೆ ಒಪ್ಪಿಸಿದ್ದು, ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ತಿಳಿಯುತ್ತಲೇ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಠಾಣೆಯ ಮುಂದೆ ಜಮಾಯಿಸಿದ್ದಾರೆ.

