ವಿಟ್ಲ: ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಅಭಾ ಕಾರ್ಡ್ )ಉಚಿತ ನೋಂದಣಿ ಕಾರ್ಯಕ್ರಮ ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ವೀರಕಂಭ ಗ್ರಾಮದ ಅಶ್ಮಿ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರ ಇದರ ಸುಜಾತಾ ಮತ್ತು ಶೈಲಜಾ ಪಜೀರು ನೋಂದಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ, ಸದಸ್ಯರಾದ ಸಂದೀಪ್ ಪೂಜಾರಿ, ಜಯಪ್ರಸಾದ್ ಶೆಟ್ಟಿ , ಜಯಂತಿ ಜನಾರ್ಧನ ಪೂಜಾರಿ , ಮೀನಾಕ್ಷಿ ಸುನಿಲ್ ನಾಯ್ಕ್ , ಉಮಾವತಿ ದಾಮೋದರ ಸಪಲ್ಯ, ಅರೋಗ್ಯ ಸಿ ಎಚ್ ಓ ಹರ್ಷಿತ, ಕಿರಿಯ ಅರೋಗ್ಯ ಸಂರಕ್ಷಣಾಧಿಕಾರಿ ಜ್ಯೋತಿ ಕೆ ಎನ್, ಆಶಾ ಕಾರ್ಯಕರ್ತೆಯರಾದ ಕೋಮಲಾಕ್ಷಿ, ಲೀಲಾವತಿ, ಸ್ನೇಹಲತಾ, ಮತ್ತು ಪಂಚಾಯತ್ ಸಿಬ್ಬಂದಿಗಳು, ಉಪಸ್ಥಿತರಿದ್ದರು.