ತಿರುವನಂತಪುರ: ಕೇರಳ ಸರ್ಕಾರದ ಈ ವರ್ಷದ ಓಣಂ ಲಕ್ಕಿ ಬಂಪರ್ ಲಾಟರಿ ಡ್ರಾನಲ್ಲಿ ಆಟೋ ಚಾಲಕರೊಬ್ಬರು ಬರೋಬ್ಬರಿ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ.
ತಿರುವನಂತಪುರದ ಶ್ರೀವರಂನ 30 ವರ್ಷದ ಅನೂಪ್ ಬಹುಮಾನ ವಿಜೇತರಾದ ಅದೃಷ್ಟಶಾಲಿ.

ತೆರಿಗೆ ಮತ್ತು ಕಮಿಷನ್ ಕಳೆದು 15.75 ಕೋಟಿ ರೂ. ಪಡೆಯಲಿದ್ದಾರೆ. ಲಾಟರಿ ಮಾರಾಟ ಮಾಡಿದ ತಿರುವನಂತಪುರದ ಭಗವತಿ ಏಜೆನ್ಸಿಗೆ 2.5 ಕೋಟಿ ರೂ. ಕಮಿಷನ್ ಸಿಗಲಿದೆ. ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಭಾನುವಾರ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಘೋಷಿಸಿದರು.
ಪ್ರತಿ ಲಾಟರಿ ಟಿಕೆಟ್ ದರ 500 ರೂಪಾಯಿ ನಿಗದಿಪಡಿಸಲಾಗಿತ್ತು. ಈ ವರ್ಷ ದಾಖಲೆಯ 66.5 ಲಕ್ಷ ಲಾಟರಿ ಟಿಕೆಟ್‌ಗಳು ಮಾರಾಟವಾಗಿತ್ತು.
