ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರು ವಸತಿ ನಿಲಯದಿಂದ ತಪ್ಪಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತಂಡ ತನಿಖೆಗೆ ಕೊಯಂಬತ್ತೂರಿಗೆ ತೆರಳಿದೆ.
ಕಾಲೇಜು ಆವರಣದಲ್ಲೇ ಇರುವ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ 3 ಗಂಟೆ ವೇಳೆಗೆ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಮೂವರು ವಿದ್ಯಾರ್ಥಿನಿಯರಲ್ಲಿ ಇಬ್ಬರು ಬೆಂಗಳೂರು, ಒಬ್ಬರು ಚಿಕ್ಕಮಗಳೂರಿನವರು. ಹಾಸ್ಟೆಲ್‌ನಿಂದ ಹೊರ ಹೋಗುತ್ತಿರುವುದು ಕಾಲೇಜಿನ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
ವಿದ್ಯಾರ್ಥಿನಿಯರು ರೈಲು ಮೂಲಕ ಕೊಯಂಬತ್ತೂರಿಗೆ ತೆರಳಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಈ ನಿಟ್ಟಿನಲ್ಲಿ ಶೋಧ ಕಾರ್ಯಕ್ಕೆ ಕಂಕನಾಡಿ ಪೊಲೀಸರ ತಂಡ ಅಲ್ಲಿಗೆ ತೆರಳಿದೆ.
