ಬೆಳ್ತಂಗಡಿ: ವ್ಯಕ್ತಿಯೋರ್ವರ ಮನೆಯ ಬಾಗಿಲಿನ ಬೀಗವನ್ನು ಮುರಿದು ದರೋಡೆಕೋರರು ಒಳಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಬಡಗಕಾರಂದೂರು ಗ್ರಾಮದ ಅಳದಂಗಡಿ ಸುಂಕದಕಟ್ಟೆ ಎಂಬಲ್ಲಿ ಸೆ.22 ರಂದು ರಾತ್ರಿ ನಡೆದಿದೆ.

ಮನೆಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಬೆಡ್ ರೂಂನಲ್ಲಿದ್ದ ಗೋದ್ರೇಜ್ ಕಪಾಟನ್ನು ತೆರೆದು ಅದರಲ್ಲಿದ್ದ ಸುಮಾರು ಎರಡೂವರೆ ತೂಕದ ಚಿನ್ನದ ಸರ -01, ಸುಮಾರು 1 ಪವನ್ ತೂಕದ 2 ಜೊತೆ ಸಣ್ಣ ಕಿವಿಯೋಲೆಗಳು, ಸುಮಾರು ಎರಡೂವರೆ ಪವನ್ ತೂಕದ 2 ಬ್ರಾಸ್‌ಲೈಟ್‌ಗಳು ಹಾಗೂ ಸುಮಾರು ಎರಡೂವರೆ ತೂಕದ ಚಿನ್ನದ ಸರ 01, ಹಾಗೂ ನಗದು ರೂ 15,000 ಮತ್ತು 10,000/- ರೂ. ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ರೂ. 2,97,000 ಮೌಲ್ಯದ ಚಿನ್ನ ಹಾಗೂ ನಗದು ಕಳವಾಗಿದೆ ಎಂದು ತಿಳಿದು ಬಂದಿದೆ.

ವೇಣೂರು ಉಪನಿರೀಕ್ಷಕರಾದ ಸೌಮ್ಯ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
