ಪುತ್ತೂರು: ಕರಾವಳಿ ಕಲಾವಿದರ ಹೊಸ ಪ್ರಯೋಗ ʼಅಂತಃರೂಪʼ ಸೆ.23 ರಂದು YES FILMS ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಒಂದೇ ದಿನದಲ್ಲಿ ಹತ್ತು ಸಾವಿರ ಮಂದಿ ವೀಕ್ಷಣೆ ಮಾಡುವ ಮೂಲಕ ಕಿರುಚಿತ್ರ ಭಾರೀ ಸದ್ದು ಮಾಡುತ್ತಿದೆ. ಪ್ರೀಮಿಯರ್ ಶೋ ಮೂಲಕ ಜನ ಮನ್ನಣೆ ಪಡೆದು ಸದ್ದು ಮಾಡಿದ್ದ ʼಅಂತಃರೂಪʼ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರ ತೆರೆ ಕಂಡಿದ್ದು ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ದಂತಿ ಕ್ರಿಯೇಷನ್ಸ್ ಹಾಗೂ ‘YES Films’ ಸಹಯೋಗದೊಂದಿಗೆ ಬನ್ನೂರು ನಿವಾಸಿ ಸಂದೀಪ್ ಪೂಜಾರಿ ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿ ಬಂದಿದ್ದು, ಶರತ್ ಪೂಜಾರಿ ಬಗ್ಗತೋಟ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ.
ತೇಜಸ್ ಪೂಜಾರಿ ಕೇಪುಳು ಕಥೆ ಬರೆದು, ಚಿದಾನಂದ ಕಡಬ ಸಂಗೀತ ನೀಡಿದ್ದಾರೆ. ತೇಜಸ್ ಪೂಜಾರಿ ಮತ್ತು ಸಂದೀಪ್ ಪೂಜಾರಿ ಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಚಿತ್ರಕ್ಕೆ ವಿಶೇಷ ಮೆರುಗು ನೀಡಿದ್ದಾರೆ. ಮಂಗಳೂರಿನ ಅನ್ವೇಶ್ ರೈ ಯವರ ನಿರ್ಮಾಣ ನಿರ್ವಹಣೆಯಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಸಂದೀಪ್ ಪೂಜಾರಿಯವರ ಸಾಹಿತ್ಯವಿದೆ.
ಕರಾವಳಿಯ ಖ್ಯಾತ ರಂಗಭೂಮಿ ಕಲಾವಿದರಾದ ರೂಪಾ ವರ್ಕಾಡಿ, ವಿಶ್ವನಾಥ ಅಸೈಗೋಳಿ, ವಿನಾಯಕ್ ಜೆಪ್ಪು ಹಾಗೂ ಹೊಸ ಪ್ರತಿಭೆಗಳಾದ ಭರತ್ ಶೆಟ್ಟಿ, ಶಿವನ್ ಸುವರ್ಣ, ಜೆಸ್ವಿನ್ ಮೆಂಡನ್, ಸಂದೀಪ್, ಮಧು ಮಡ್ಯಾರ್, ಕೌಶಿಕ್ ಅಮೀನ್ ತಾರಾಗಣದಲ್ಲಿದ್ದಾರೆ.