ಪುತ್ತೂರು: ವ್ಯಕ್ತಿಯೋರ್ವರ ಬಾಡಿಗೆ ಮನೆ ಹಠಾತ್ ಆಗಿ ಕುಸಿದು ಬಿದ್ದ ಘಟನೆ ಚಿಕ್ಕಪುತ್ತೂರು ಮಡಿವಾಳಕಟ್ಟೆ ಸಮೀಪ ನಡೆದಿದೆ.
ವಸಂತ್ ಮಡಿವಾಳ ರವರ ಮನೆ ಇಂದು ಹಠಾತ್ ಆಗಿ ಕುಸಿದು ಬಿದ್ದಿದ್ದು, ಸುಮಾರು 7 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಮನೆಯಲ್ಲಿ ಮೂರು ಜನ ವಾಸವಿದ್ದು, ಘಟನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.