ವಿಟ್ಲ: ಯುವಕೇಸರಿ ಅಬೀರಿ-ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ ವಾರ್ಷಿಕ ಮಹಾಸಭೆಯು ಇಂದು ಚಂದಳಿಕೆ ಯುವಕೇಸರಿ ಕಾರ್ಯಾಲಯದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ.)ದ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಪರನೀರು, ಬಿಜೆಪಿ ಪುತ್ತೂರು ಮಂಡಲದ ಉಪಾಧ್ಯಕ್ಷರಾದ ಅರುಣ್ ವಿಟ್ಲ ಮತ್ತು ವಿಟ್ಲ ಭಾರತ್ ಗ್ರೂಪ್ಸ್ ನ ಮಾಲಕರದ ಸಂಜೀವ ಪೂಜಾರಿ ಭಾಗವಹಿಸಿ ನೂತನ ಕಾರ್ಯಕಾರಿಣಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಪಟ್ಲ, ಗೌರವಾಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಕಾರ್ಯಾಧ್ಯಕ್ಷರಾಗಿ ಚಿದಾನಂದ ಶೆಟ್ಟಿ ಉಜಿರೆಮಾರು, ಉಪಾಧ್ಯಕ್ಷರಾಗಿ ದುರ್ಗಾಪ್ರಸಾದ್ ಅತಿಕಾರಬೈಲು, ಸುರೇಶ ಗೌಡ ಓಟೆ, ಪ್ರವೀಣ್ ಗೌಡ ಕಟ್ಟತ್ತಿಲ, ಪ್ರಧಾನ ಕಾರ್ಯದರ್ಶಿಯಾಗಿ ವನಿತ್ ಅಬೀರಿ, ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ ಕೇಪುಳಗುಡ್ಡೆ, ಜತೆ ಕಾರ್ಯದರ್ಶಿಯಾಗಿ ಪುಷ್ಪರಾಜ್ ಡೆಪ್ಪಿಣಿ ಮತ್ತು ಸುಜಿತ್ ಕುರುಂಬಳ, ಕೋಶಾಧಿಕಾರಿಯಾಗಿ ಮಧುಕರ ಅಬೀರಿ, ಜೊತೆ ಕೋಶಾಧಿಕಾರಿಯಾಗಿ ಅಶ್ವಥ್ ಪೂಜಾರಿ ಪರನೀರು ಮತ್ತು ಸಂಜೀವ ಅಬೀರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗಣೇಶ ಅಬೀರಿ, ಪ್ರಧಾನ ಸಂಚಾಲಕರಾಗಿ ದಿವಾಕರ ಶೆಟ್ಟಿ ಅಬೀರಿ ಮತ್ತು ಸುಶಾಂತ್ ಸಾಲಿಯಾನ್ ಚಂದಳಿಕೆ, ದತ್ತಿನಿಧಿ ಪ್ರಮುಖರಾಗಿ ಶಶಿಧರ ಕೇಪುಳಗುಡ್ಡೆ, ಕಾರ್ಯಾಲಯ ಕಾರ್ಯದರ್ಶಿಯಾಗಿ ಅರುಣ್ ಚಂದಳಿಕೆ, ಕ್ರೀಡಾಕಾರ್ಯದರ್ಶಿಯಾಗಿ ಹರೀಶ್ ಕೊಪ್ಪಳ ಮತ್ತು ಮಹೇಶ್ ಪಡೀಲ್, ಸಾಮಾಜಿಕ ಜಾಲತಾಣ ಪ್ರಮುಖರಾಗಿ ಪುನೀತ್ ಕುರುಂಬಳ, ಕಾನೂನು ಸಲಹೆಗಾರರಾಗಿ ಗೋವಿಂದ ರಾಜ್ ಪೆರುವಾಜೆ, ಗೌರವ ಸಲಹೆಗಾರರಾಗಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ, ದೇಜಪ್ಪ ಪೂಜಾರಿ ನಿಡ್ಯ, ಸಂಜೀವ ಪೂಜಾರಿ ವಿಟ್ಲ, ಈಶ್ವರ ಬಂಗೇರ ಅಬೀರಿ, ವಿಠಲ ಪೂಜಾರಿ ಅತಿಕಾರಬೈಲು, ಲೋಕನಾಥ್ ಕುರುಂಬಳ, ಚಂದ್ರಹಾಸ ಅಬೀರಿ, ಗಂಗಾಧರ ಪೂಜಾರಿ ಪರನೀರು ಮತ್ತು ಪದ್ಮನಾಭ ಶೆಟ್ಟಿ ಚಪುಡಿಯಡ್ಕ ಆಯ್ಕೆಯಾದರು.

ಮಹಾಸಭೆಯಲ್ಲಿ ಕಳೆದ 4 ವರ್ಷದಲ್ಲಿ ಒಟ್ಟು 5,60,800 ರೂಗಳನ್ನು ಮತ್ತು ಈ ವರ್ಷದಲ್ಲಿ 1,30,800 ರೂಗಳನ್ನು ದತ್ತಿನಿಧಿ ಯೋಜನೆಯಡಿಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಲಾಯಿತು. ಅಲ್ಲದೆ ತುರ್ತು ಸಂದರ್ಭದಲ್ಲಿ ಹಲವಾರು ಜನರಿಗೆ ರಕ್ತದಾನ ಮಾಡಲಾಗಿದೆ ಎಂದು ತಿಳಿಸಲಾಯಿತು. 2022-23 ವಾರ್ಷಿಕ ಅವಧಿಯಲ್ಲಿ 5,49,219 ರೂಗಳ ವ್ಯವಹಾರವನ್ನು ನಡೆಸಲಾಗಿದೆ ಎಂದು ತಿಳಿಸಲಾಯಿತು.
ಯುವಕೇಸರಿಯ ಸುಶಾಂತ್ ಸಾಲಿಯಾನ್ ಚಂದಳಿಕೆ ಸ್ವಾಗತಿಸಿ, ದಿವಾಕರ ಶೆಟ್ಟಿ ಅಬೀರಿ ವಂದಿಸಿದರು, ವಿಠಲ ಪೂಜಾರಿ ಅತಿಕಾರಬೈಲು ನಿರೂಪಿಸಿದರು ಮತ್ತು ಯೋಗೀಶ ಕೇಪುಳಗುಡ್ಡೆ ಸಹಕರಿಸಿದರು.
