ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕ್ರಿಯೆ ನಡೆಸಿ ಗರ್ಭಿಣಿಯನ್ನಾಗಿಸಿದ್ದಾನೆ ಎಂದು ಆರೋಪಿಸಿ ಯುವಕನೋರ್ವ ಮೇಲೆ ಠಾಣೆಗೆ ದೂರು ನೀಡಿದ್ದು, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಮಿತ್ತೂರು ಉಬರಡ್ಕ ನಿವಾಸಿ ತೀರ್ಥಪ್ರಸಾದ್(25) ಆರೋಪಿ ಯುವಕ.
ಬಾಲಕಿಗೆ ಕಳೆದ 4 ತಿಂಗಳ ಹಿಂದೆ ವಾಟ್ಸ್‌ಪ್ ಗ್ರೂಪ್‌ನಲ್ಲಿ ಉಬರಡ್ಕದ ತೀರ್ಥಪ್ರಸಾದ್ ಎಂಬವನ ಪರಿಚಯವಾಗಿದ್ದು, ಬಾಲಕಿಗೆ ತೀರ್ಥಪ್ರಸಾದ್ ಕರೆ ಮಾಡಿ ಇಬ್ಬರು ಪರಸ್ಪರ ಮಾತನಾಡಿಕೊಂಡಿದ್ದು, 30.06.2022 ರಂದು ಸುಳ್ಯಕ್ಕೆ ಬಾ ಮಾತನಾಡಲಿಕ್ಕಿದೆ ಎಂದು ಹೇಳಿದ ಪ್ರಕಾರ ಬಾಲಕಿ ಬಸ್ಸಿನಲ್ಲಿ ಸುಳ್ಯಕ್ಕೆ ಬಂದಿದ್ದು, ಸುಳ್ಯ ಬಸ್ಸು ನಿಲ್ದಾಣಕ್ಕೆ ತೀರ್ಥಪ್ರಸಾದ್ ಬಂದು ಆತನ ಬೈಕ್ ನಲ್ಲಿ ಬಾಲಕಿಯನ್ನು ಕುಳ್ಳಿರಿಸಿಕೊಂಡು ಆತನ ಸ್ನೇಹಿತನ ರೂಮ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಿದ್ದು, ಬಾಲಕಿಯನ್ನು ಪುಸಲಾಯಿಸಿ ಈ ರೀತಿಯಾಗಿ ನಡೆಸಿದ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ: 110/2022 ಕಲಂ: 376 ಐಪಿಸಿ ಮತ್ತು Sec: 4, POCSO Act 2012 ರಂತೆ ಪ್ರಕರಣ ದಾಖಲಾಗಿದೆ..
