ನವದೆಹಲಿ: ದೇಶಾದ್ಯಂತ ನೂರಾರು ದಾಳಿಗಳನ್ನು ನಡೆಸಿ ಹಲವರನ್ನು ಬಂಧನ ಮಾಡಿದ ಬಳಿಕ ಕೇಂದ್ರ ಸರ್ಕಾರ ಭಯೋತ್ಪಾದಕ ಕೃತ್ಯಗಳಿಗೆ ಹಣದ ನೆರವು ನೀಡಿದ ಆರೋಪ ಮೇರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ನಿಷೇಧ ಮಾಡಿದೆ.
ಗೃಹ ಸಚಿವಾಲಯ (MHA) ಐದು ವರ್ಷಗಳ ಕಾಲ ನಿಷೇಧಿಸಿ ಹೇರಿ ಆದೇಶ ಹೊರಡಿಸಿದ್ದು, ಪಿಎಫ್‌ಐ ಜೊತೆಗೆ 8 ಸಹ ಸಂಘಟನೆಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಲಾಗಿದೆ.
ಉತ್ತರಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯಗಳಿಂದ
ಪಿಎಫ್‌ಐ ಸಂಘಟನೆಯ ಬ್ಯಾನ್ ಮಾಡಲು ಶಿಫಾರಸು
ಮಾಡಲಾಗಿತ್ತು. ಯುಎಪಿಎ ಕಾಯಿದೆ 1967 ರ ಸೆಕ್ಷನ್ (3) (1) ರಡಿ ಪಿಎಫ್‌ಐ ಸಂಘಟನೆಯ ನಿಷೇಧ ಮಾಡಲಾಗಿತ್ತು. ಪಿಎಫ್‌ಐ ಸಹ ಸಂಘಟನೆಗಳನ್ನು ಕೂಡ ನಿಷೇಧ ಮಾಡಲಾಗಿದೆ.
- ರಿಹಾಬ್ ಇಂಡಿಯಾ ಫೌಂಡೇಶನ್ (RIF)
- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI)
- ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ (AIIC)
- ನ್ಯಾಷನಲ್ ಕಾನಫೇಡರೇಷನ್ ಆಫ್ ಹೂಮನ್
ರೈಟ್ಸ್ ಆರ್ಗನೈಸೇಶನ್ (NCHRO) - ನ್ಯಾಷನಲ್ ವುಮೆನ್ ಫ್ರೆಂಟ್ (NWF)
- ಜ್ಯೂನಿಯರ್ ಫ್ರೆಂಟ್ (JF)
- ಎಂಪವರ್ ಇಂಡಿಯಾ ಫೌಂಡೇಶನ್
- ರಿಹಾಬ್ ಫೌಂಡೇಶನ್, ಕೇರಳ.
ದೇಶದಾದ್ಯಂತ ಸೆಪ್ಟೆಂಬರ್ 22 ಹಾಗೂ ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ದಳ (NIA), ಜಾರಿ ನಿರ್ದೇಶನಾಲಯ (ED) ಮತ್ತು ರಾಜ್ಯ ಪೊಲೀಸರು ಪಿಎಫ್ಐ ಮೇಲೆ ದಾಳಿ ನಡೆಸಿದ್ದರು. ಮೊದಲ ದಾಳಿಯಲ್ಲಿ 106 ಮಂದಿಯನ್ನು ಬಂಧನ ಮಾಡಲಾಗಿತ್ತು. ಎರಡನೇ ದಾಳಿಯಲ್ಲಿ 247 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ದಾಳಿಗಳ ಸಂದರ್ಭದಲ್ಲಿ ತನಿಖಾ ಸಂಸ್ಥೆಗೆ ಅಗತ್ಯ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಕೇಂದ್ರ
ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.