ಬಂಟ್ವಾಳ: ತಾಲೂಕು ವೀರಕಂಭ ಗ್ರಾಮದ ಶ್ರೀ ಶಾರದಾ ಸೇವಾ ಟ್ರಸ್ಟ್( ರಿ) ಹಾಗೂ ಶ್ರೀ ಶಾರದಾ ಪೂಜಾ ಸಮಿತಿ, ಶ್ರೀ ಶಾರದಾ ಭಜನ ಮಂದಿರ ವೀರಕಂಭ ಇಲ್ಲಿ 38ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಅ.3 ರಂದು ಬೆಳಿಗ್ಗೆ ಗಣಹೋಮ ಬಳಿಕ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಸಂಜೆ ತನಕ ಭಜನಾ ಕಾರ್ಯಕ್ರಮ. ಅ.4ನೇ ಮಂಗಳವಾರ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಅ.5 ರಂದು ಮಧ್ಯಾಹ್ನ ರಂಗಪೂಜೆ ಬಳಿಕ ಮಹಾ ಅನ್ನಸಂತರ್ಪಣೆ ನಡೆದು ಸಂಜೆ ಗಂಟೆ 4 ರಿಂದ ವಿಸರ್ಜನಾ ಪೂಜೆ ಹಾಗೂ ಶ್ರೀಶಾರದಾ ಮಾತೆಯ ಭವ್ಯ ಶೋಭಯಾತ್ರೆ ಜರುಗಲಿರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.