ಚಿಕ್ಕಮಗಳೂರು: ಉಗ್ರ ದಾವೂದ್ ಇಬ್ರಾಹಿಂನನ್ನು ವೈಭವೀಕರಿಸುವ ಬರಹಗಳನ್ನು ಹೊಂದಿದ್ದ ಕೇರಳ ಮೂಲದ ಖಾಸಗಿ ಪ್ರವಾಸಿ ಬಸ್ಸೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದಿಂದ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಈ ಬಸ್ಸಿನ ಮೇಲೆ ರೈಸ್ ಆಫ್ ಅ ಡಾನ್ ಸೇರಿದಂತೆ ದಾವೂದ್ ಇಬ್ರಾಹಿಂನನ್ನು ಹೊಗಳುವ ಹಲವಾರು ಬರಹಗಳನ್ನು ಬರೆಯಲಾಗಿತ್ತು. ಈ ಬರಹಗಳನ್ನು ಗಮನಿಸಿದ ಹಿಂದೂಪರ ಸಂಘಟನೆಗಳು ಬಸ್ಸನ್ನು ತಡೆದು ಚಾಲಕ ಸೇರಿ ಮಾಲೀಕರ ವಿರುದ್ಧ FIR ದಾಖಲು ಮಾಡುವಂತೆ ಪಟ್ಟು ಹಿಡಿದಿದ್ದಾರೆ.
ಸದ್ಯ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಬಸ್ಸನ್ನು ಸೀಜ್ ಮಾಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.


























