ಪುತ್ತೂರು: ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ Zoom.intv ನೇತೃತ್ವದಲ್ಲಿ ‘ಪುತ್ತೂರ್ದ ಪಿಲಿ ರಂಗ್ Season-1’ ವಿಶೇಷ ಕಾರ್ಯಕ್ರಮ ಅ.1 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
”ಪಿಲಿ ರಂಗ್” ಕಾರ್ಯಕ್ರಮದ ಅದ್ದೂರಿ ವೇದಿಕೆಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದು, ‘ಟೈಗರ್ ಫ್ರೆಂಡ್ಸ್ ಕಲ್ಲಡ್ಕ’ ತಂಡವು ಪ್ರಥಮ ಸ್ಥಾನವನ್ನು ಪಡೆದು 1 ಲಕ್ಷ ರೂ. ನಗದು, ಟ್ರೋಫಿ ಹಾಗೂ ಎಲ್ಇಡಿ ಟಿವಿಯನ್ನು ಬಹುಮಾನವಾಗಿ ಪಡೆಯಿತು. ‘ಕಲ್ಲೇಗ ಟೈಗರ್ಸ್’ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದ್ದು, 50 ಸಾವಿರ ರೂ. ನಗದು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಹಲವು ಗಣ್ಯರು ಪಾಲ್ಗೊಂಡಿದ್ದು, ಸಾವಿರಾರು ಮಂದಿ ಅದ್ದೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು..
ಒಟ್ಟು ಆರು ತಂಡಗಳು ಭಾಗಿ..
- ‘ಕಲ್ಲೇಗ ಟೈಗರ್ಸ್ ‘
- ‘ಟೈಗರ್ ಫ್ರೆಂಡ್ಸ್ ಕಲ್ಲಡ್ಕ’
- ‘ಅಯ್ಯಪ್ಪ ಟೈಗರ್ಸ್ ಮುಲ್ಕಿ’
- ‘ವಿಟ್ಲ ಉಮಾನಾಥೇಶ್ವರ ಟೈಗರ್ಸ್’
- ‘ಮುರಳಿ ಬ್ರದರ್ಸ್ ಟೈಗರ್ಸ್ ಪುತ್ತೂರು’
- ‘ಅಂಗಾರಗುಡ್ಡೆ ಟೈಗರ್ಸ್’
‘ಕಿನ್ನಿ ಪಿಲಿ’ ಬಹುಮಾನವನ್ನು ‘ವಿಟ್ಲ ಉಮಾನಾಥೇಶ್ವರ ತಂಡದ ಕಿನ್ನಿ ಪಿಲಿ ಪಡೆದಿದ್ದು, ‘ಬೆಸ್ಟ್ ಬ್ಲಾಕ್ ಟೈಗರ್’ ಬಹುಮಾನವನ್ನು ‘ಮುರಳಿ ಬ್ರದರ್ಸ್’ ತಂಡ ಬ್ಲಾಕ್ ಟೈಗರ್ ಪಡೆದಿದ್ದಾರೆ.
‘ಉತ್ತಮ ತಾಸೆ’ ಬಹುಮಾನವನ್ನು ‘ಟೈಗರ್ ಫ್ರೆಂಡ್ಸ್ ಕಲ್ಲಡ್ಕ’ ಪಡೆದಿದ್ದು, ‘ ಉತ್ತಮ ‘ಮುಡಿ ಹಾಕುವ’ ಬಹುಮಾನವನ್ನು ‘ಅಯ್ಯಪ್ಪ ಟೈಗರ್ಸ್’ ಪಡೆದರು.
‘ಬೆಸ್ಟ್ ಕಲರ್ ಸಿಂಗಲ್’ ಬಹುಮಾನವನ್ನು ‘ಟೈಗರ್ ಫ್ರೆಂಡ್ಸ್ ಕಲ್ಲಡ್ಕ’ದ ದುರ್ಗಾಪ್ರಸಾದ್ ರವರು ಪಡೆದಿದ್ದು, ‘ಬೆಸ್ಟ್ ಪೈಂಟ್’ ಬಹುಮಾನ ‘ಕಲ್ಲೇಗ ಟೈಗರ್ಸ್’ ಪಡೆದಿದ್ದಾರೆ..