ಶಿರಸಿ: ಸಂಸದ ಅನಂತಕುಮಾರ ಹೆಗ್ಡೆ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಪಟ್ಟಣದ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಒಂದನೇ ಬಾರಿ ಫೋನ್ ಎತ್ತುವ ಮೊದಲೇ ಸಂಪರ್ಕ ಕಡಿತವಾಗಿದೆ. ಮತ್ತೊಮ್ಮೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ, ಅನಂತಕುಮಾರ ಹೆಗಡೆ ನೀನೇ ಅಲ್ವಾ? ಮೊದಲ ಸಲ ಪೋನ್ ಮಾಡಿದಾಗ ದೂರು ನೀಡಿದ್ದೀಯ. ಪತ್ರಿಕೆಗಳಲೆಲ್ಲಾ ಸುದ್ದಿಯಾಗಿತ್ತು. ಈ ಬಾರಿ ಏನು ಮಾಡ್ತೀಯಾ? ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆಗಂತುಕ ವ್ಯಕ್ತಿ ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.