ಪುತ್ತೂರು: ಮಾರ್ಚ್ 8 ಮತ್ತು 9 ರಂದು ವಿಜೃಂಭಣೆಯಿಂದ ನಡೆಯುವ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ ರವರನ್ನು ಆಯ್ಕೆ ಮಾಡಲಾಗಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ರವಿ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಉಮೇಶ್ ಗೌಡ ಗುತ್ತಿನಪಾಲು, ಜಯಪ್ರಸಾದ್ ಅಂಬಟ ಮತ್ತು ಸೇಸಪ್ಪ ಶೆಟ್ಟಿ ಪೊನೋನಿ ರವರನ್ನು ಆಯ್ಕೆ ಮಾಡಲಾಗಿದೆ.
ಗೌರವ ಸಲಹೆಗಾರರಾಗಿ ಭಾಸ್ಕರ್ ಆಚಾರ್ ಹಿಂದಾರ್, ಮುರಳೀಧರ ಭಟ್ ಬಂಗಾರಡ್ಕ, ಹೆಗ್ಗಪ್ಪ ರೈ ಪೊನೋನಿ, ಪ್ರಸನ್ನ ಭಟ್ ಪಂಚವಟಿ, ಸುಧೀರ್ ಶೆಟ್ಟಿ, ಬಾಲಕೃಷ್ಣ ಕಣ್ಣಾರಾಯ, ಜಯಪ್ರಕಾಶ್ ರೈ ಚೆಲ್ಯಡ್ಕ, ಅಶೋಕ್ ಪುತ್ತಿಲ, ಶ್ರೀಕಾಂತ ಆಚಾರ್ ಹಿಂದಾರು, ರಘುನಾಥ್ ಶೆಟ್ಟಿ ಪೊನೋನಿ, ಶ್ರೀರಂಗ ಶಾಸ್ತ್ರಿ ಮಣಿಲ, ವೆಂಕಟೇಶ್ ಅಯ್ಯಂಗಾರ್, ಗುಲಾಬಿ ಶೆಟ್ಟಿ ಕಂಪರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ ಸ್ವಾಗತಿಸಿ, ರಾಮಣ್ಣ ಗೌಡ ವಂದಿಸಿದರು. ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು..