ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡೆ, ಸಮಾಜ ಕಲ್ಯಾಣ
ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ವಿರುದ್ಧ
ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಸ್ವಂತ ಅಳಿಯನ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದೆ.
ಅಳಿಯ ನವೀನ್ ಗೌಡ ನನ್ನನ್ನು ಅಪಹರಣ ಮಾಡಿ ಚಿತ್ರಹಿಂಸೆ
ನೀಡಿದ್ದಾರೆ ಎಂದು ಆರೋಪಿಸಿ ದಿವ್ಯಪ್ರಭಾ, ಪುತ್ರಿ ಸ್ಪಂದನಾ,
ಪತಿ ಪರಶುರಾಮ್ ಸೇರಿದಂತೆ ಆರು ಜನರ ವಿರುದ್ಧ ನೀಡಿದ
ದೂರಿನಂತೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ..