ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೋಗಿಮಠ ಕೂಡೂರು ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಕ್ಕೆ ನಾಗರೋತ್ಥಾನ ಯೋಜನೆಯಡಿಯಲ್ಲಿ 5 ಲಕ್ಷ ರೂ. ಅನುದಾನವನ್ನು ಶಾಸಕರಾದ ಸಂಜೀವ ಮಠಂದೂರು ರವರು ಒದಗಿಸಿಕೊಟ್ಟಿದ್ದು, ರಸ್ತೆ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ಇಂದು ನೆರವೇರಿತು.

ಕಾರ್ಯಕ್ರಮದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ, ಶಕ್ತಿಕೇಂದ್ರದ ಅಧ್ಯಕ್ಷರಾದ ಹರೀಶ್ ವಿಟ್ಲ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದಂತಹ ರವಿಶ್ ಶಿವಾಜಿನಗರ, ಪಟ್ಟಣ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ ಸೇರಾಜೆ ಜೋಗಿಮಠ ಬೂತ್ ಅಧ್ಯಕ್ಷರಾದ ಹೇಮಚಂದ್ರ ಜೋಗಿಮಠ, ಕಾರ್ಯದರ್ಶಿಯಾದ ಸುಮತಿ ಕೋಟ್ಯಾನ್ ಸೇರಾಜೆ ಹಾಗೂ ಜೋಗಿಮಠ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಒದಗಿಸಿಕೊಡಲು ಕಾರಣಕರ್ತರಾದ ವಿಟ್ಲ ಮಹಾ ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಮುಖಂಡರಿಗೆ ಹಾಗೂ ಅನುದಾನ ಒದಗಿಸಿದ ಶಾಸಕರಿಗೆ
ಬೂತ್ ನಂಬರ್17 ಸೇರಾಜೆ ಜೋಗಿಮಠದ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.



