ಪುತ್ತೂರು: ಮಳುವೇಲು ತರವಾಡು ಮನೆ ಬೆಳ್ಳಿಪ್ಪಾಡಿಯಲ್ಲಿ ಧರ್ಮದೈವ ರುದ್ರಚಾಮುಂಡಿ, ವರ್ಣರ ಪಂಜುರ್ಲಿ, ಸತ್ಯದೇವತೆ ಕಲ್ಲುರ್ಟಿ ಮತ್ತು ಗುಳಿಗ ದೈವದ ನೇಮೋತ್ಸವ ಮಾ.11 ಮತ್ತು 12 ರಂದು ನಡೆಯಲಿದೆ.
ಮಾ.11 ರಂದು ಬೆಳಿಗ್ಗೆ ಗಣಹೋಮ, ಮುಡಿಪು ಶುದ್ಧ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ ದೈವದ ಭಂಡಾರ ತೆಗೆದು ಕಲ್ಲುರ್ಟಿ ದೈವದ ನೇಮೋತ್ಸವ, ಅನ್ನ ಸಂತರ್ಪಣೆ ಹಾಗೂ ಜಾವತೆ, ವರ್ಣರಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಮಾ.12 ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ..