ಬಂಟ್ವಾಳ: ತಾಲೂಕು ಕಚೇರಿ ಮುಂಭಾಗ 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ರೈತಸಂಘ ಆಯೋಜಿಸಿದ್ದ ಪ್ರತಿಭಟನೆಗೆ ಬಂದ ವೇಳೆ ಬಿ.ಸಿ.ರೋಡಿನ ರೋಟರಿ ಕ್ಲಬ್ ಲಯನ್ಸ್ ಭವನದ ಬಳಿ ನಿಲ್ಲಿಸಿದ್ದ ಆಟೋವನ್ನೇ ಕಳವು ಮಾಡಿದ ಘಟನೆ ನಡೆದಿದೆ.
ಈ ಕುರಿತು ವಿಟ್ಲದ ಯೋಗೀಶ್ ಕುಮಾರ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬಿಸಿರೋಡಿನ ಲಯನ್ಸ್ ಕ್ಲಬ್ ಭವನದ ಹತ್ತಿರ ತಮ್ಮ ಆಟೋ ರಿಕ್ಷಾವನ್ನು ನಿಲ್ಲಿಸಿ, ರೈತರ ಪ್ರತಿಭಟನೆಗೆ ತೆರಳಿದ್ದಾರೆ. ಪ್ರತಿಭಟನೆ ಮುಗಿದ ನಂತರ ಮಧ್ಯಾಹ್ನ ಪುನಃ ಅಲ್ಲಿಗೆ ಹೋಗಿ ನೋಡಲಾಗಿ ಆಟೋ ರಿಕ್ಷಾ ನಿಲ್ಲಿಸಿದ್ದಲ್ಲಿ ಇರದೇ ಇದ್ದು ಅಲ್ಲೆ ಸುತ್ತ ಮುತ್ತ ಹುಡುಕಲಾಗಿ ಸಿಗದೇ ಇದ್ದು ಯಾರೋ ಕಳ್ಳರು ಆಟೋ ರಿಕ್ಷಾ ಕಳವು ಮಾಡಿಕೊಂಡು ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..