ವಿಟ್ಲ : ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರಿಗೆ ನೆರೆಮನೆಯವರು ಹಲ್ಲೆ ಮಾಡಿದ ಘಟನೆ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ಬದ್ರಿಯಾ ಕಾಂಪ್ಲೆಕ್ಸ್ ನಿವಾಸಿ ಜೈನುಲ್ ಅಬೀದ್ ರವರ ಪತ್ನಿ ಆಯಿಶತ್ ಮುಬೀನಾ ರವರು ನೀಡಿದ ದೂರಿನ ಮೇರೆಗೆ ಹನ್ನತ್ ಹಾಗೂ ಅವರ ಸಹೋದರಿ, ತಾಯಿ, ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.
ಆಯಿಶತ್ ಮುಬೀನಾ ತನ್ನ ತವರು ಮನೆಗೆ ಹೋಗುವರೇ ಹೊರಡುತ್ತಿದ್ದ ಸಮಯ ನೆರೆ ಮನೆಯ ನಿವಾಸಿ ಹನ್ನತ್, ಮುಬೀನಾ ರವರ ಮಗಳಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದಾಗ ಮುಬೀನಾ, ಹನ್ನತ್ ರವರಲ್ಲಿ ಯಾಕೆ ಸಣ್ಣ ಮಕ್ಕಳಿಗೆ ಶಾಪ ಹಾಕುತ್ತಿ ಎಂದು ಕೇಳಿದಾಗ ಹನ್ನತ್, ಆಕೆಯ ಅಕ್ಕ ಮತ್ತು ಹನ್ನತ್ ನ ತಾಯಿ ಮುಬೀನಾ ರನ್ನು ತಡೆಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದು, ಹನ್ನತ್ ರವರ ಮಾವ ಕೂಡ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಕಲಂ: 341,504,506,354,323, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.