ಪುತ್ತೂರು : ಭಾಷಾ ಪ್ರೌಢಿಮೆ ಬೆಳೆಯುವಲ್ಲಿ ಹಾಗೂ ಮನಸ್ಸಿನ ಏಕಾಗ್ರತೆಗೆ ಯಕ್ಷಗಾನ ಕಲಿಕೆ ತುಂಬಾ ಸಹಕಾರಿ ಎಂದು ಹಿರಿಯ ಸಹಕಾರಿ ಧುರೀಣ, ಸಹಕಾರಿ ರತ್ನ ಪುರಸ್ಕೃತರಾದ ವಿದ್ಯಾರಶ್ಮಿ ವಿದ್ಯಾಲಯದ ಸ್ಥಾಪಕರಾದ ಸೀತಾರಾಮ ರೈ ಸವಣೂರು ಹೇಳಿದರು.

ಅವರು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪಡ್ಡಯೂರಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ವಾಕ್ ಚಾತುರ್ಯ ಬೆಳೆಯುವಲ್ಲಿ ಯಕ್ಷಗಾನ ಕಲಿಕೆಯಿಂದ ತುಂಬಾ ಸಹಕಾರಿ ಎಂದು ತಿಳಿಸುತ್ತಾ ಅನೇಕ ಜನ ಕಲಾಪ್ರೇಮಿಗಳು ಶಿಕ್ಷಣ ವಂಚಿತರಾದರು. ಯಕ್ಷಗಾನದಿಂದ ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ರವರು ಶಿಕ್ಷಣ ಜೊತೆಗೆ ಯಕ್ಷಗಾನ ಕಲಿಕೆ ಪೂರಕವಾಗಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ವಿದ್ಯಾರ್ಥಿಗಳು ಯಕ್ಷಗಾನ ಕಲಿತು ಒಂದೇ ವೇದಿಕೆಯಲ್ಲಿ ತರುವ ಒಂದು ದೊಡ್ಡ ಮಟ್ಟಿನ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲಿತು ನಮ್ಮ ಕಲೆ ಸಂಸ್ಕೃತಿಯನ್ನು ದೇಶ ವಿದೇಶದಲ್ಲಿ ಪಸರಿಸುವ ಕಾರ್ಯ ಮಾಡಬೇಕು ಎಂಬುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪುತ್ತೂರು ಇದರ ಪ್ರಾಂಶುಪಾಲರಾದ ಸತೀಶ ತುಂಬ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಯಕ್ಷಧ್ರುವ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್ ,ಉಪ್ಪಿನಂಗಡಿ ಘಟಕದ ಸಂಚಾಲಕರಾದ ಶ್ಯಾಮಸುಂದರ್ ಶರ್ಮಾ, ಪುತ್ತೂರು ಘಟಕದ ಜಯರಾಜ್ ಭಂಡಾರಿ , ಯಕ್ಷಗಾನ ಗುರುಗಳಾದ ಗಣೇಶ್ ಪಾಳೆಚ್ಚರ್ , ದಿವಿತ್ ಪೇರಾಡಿ, ಅನ್ನಪೂರ್ಣ, ಗಂಗಾಧರ್ ರೈ, ಫ್ರೋ.ದತ್ತಾತ್ರೇಯ ರಾವ್, ಭಾಗವತರಾದ ಲಕ್ಷ್ಮಿನಾರಾಯಣ ಭಟ್ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕಿ ವಿನತ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕಿ ವಾಣಿ ಸ್ವಾಗತಿಸಿ , ಆಂಗ್ಲ ಭಾಷಾ ಶಿಕ್ಷಕರಾದ ಬಾಲಕೃಷ್ಣ ವಂದಿಸಿದರು.
ಶಿಕ್ಷಕರಾದ ಜಯಪ್ರಕಾಶ್, ಕೃಷ್ಣ ಕುಮಾರ್, ಉಷಾ, ವಿಜಯಾ, ಸಂಜಯ್, ರಕ್ಷಿತ್ , ರೇಷ್ಮಾ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಂಕೇತಿಕವಾಗಿ ಯಕ್ಷಗಾನ ಕಲಿಕೆ ತರಬೇತಿಯನ್ನು ನಡೆಸಿಕೊಡಲಾಯಿತು.