2020ರಲ್ಲಿ ಮದುವೆ, ಪತ್ನಿಗೆ ಓದುವ ಆಸೆ, ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲಿ ಎನ್ನುವ ನಿಸ್ವಾರ್ಥ ಪ್ರೀತಿ ಪತಿಯದ್ದು. ಹಾಗಾಗಿ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ. ಈ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಅವರ ಪ್ರಕರಣಕ್ಕೆ ಸ್ವಲ್ಪ ಹೋಲುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಪ್ರಕರಣದಲ್ಲಿ ಮಹಿಳೆಗೆ ಕೆಲಸ ಸಿಕ್ಕಿಲ್ಲ.
ಪತಿಯ ಆರೋಪವೇನು?: ಈ ಘಟನೆ ಕುರಿತು ಪತಿ ಟಿಂಕು ಕುಮಾರ್ ಯಾದವ್ ಮಾತನಾಡಿ, ಸೆ.19ರಂದು ಪತ್ನಿಗೆ ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟಿದ್ದರೂ ಮನೆಗೆ ಬಂದಿರಲಿಲ್ಲ. ನಂತರ ತಾನು ಗೊಡ್ಡಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ವಿವಾಹಿತ ಮಹಿಳೆ ಬುಧೋನಾ ಗೊಡ್ಡಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಜತೆ ಓಡಿ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ. ದೆಹಲಿಗೆ ಹೋಗಿ ಯಾವುದೋ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಫೋಟೊಗಳನ್ನು ಕಳುಹಿಸಿದ್ದಾಳೆ ಎಂದು ಟಿಂಕು ಹೇಳಿದ್ದಾರೆ.
ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಆಕೆ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಭಾರವಾದ ಮನಸ್ಸಿನಿಂದ ನೋವು ಹಂಚಿಕೊಂಡಿದ್ದಾರೆ.
ಸಾಲ ಮಾಡಿ ನರ್ಸಿಂಗ್ ಪ್ರವೇಶ ಪಡೆದಿದ್ದಳು: ನವೆಂಬರ್ 2020ರಲ್ಲಿ ಟಿಂಕು ಕುಮಾರ್ ಯಾದವ್ ಅವರು ಪ್ರಿಯಾ ಕುಮಾರಿ ಅವರನ್ನು ಸಾಂಪ್ರದಾಯಿಕವಾಗಿ ವಿವಾಹವಾದರು. ಟಿಂಕು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಆಸೆಯಂತೆ ಆಕೆಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದ. ಇದರಲ್ಲಿ ಪತಿ ಒಟ್ಟು 2.5 ಲಕ್ಷ ಸಾಲ ಪಡೆದು ಹಾಸ್ಟೆಲ್ ಶುಲ್ಕದ ಜತೆ ವಸತಿ, ಊಟದ ವ್ಯವಸ್ಥೆ ಮಾಡಿದ್ದಾನೆ. ಅವರ ಗೊಡ್ಡಾದಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದುತ್ತಿದ್ದರು. ಅಂತಿಮ ಪರೀಕ್ಷೆಯು ಕೆಲವೇ ದಿನಗಳಲ್ಲಿ ನಡೆಯಲಿದೆ.
ವಿವಾಹಿತ ಮಹಿಳೆಯ ಪ್ರಿಯಕರ ನಿರುದ್ಯೋಗಿ: ಪ್ರಿಯಾ ಕುಮಾರಿ ಪ್ರಿಯಕರ ನಿರುದ್ಯೋಗಿ, ಹುಡುಗಿಯ ಮನೆ ಹಾಗೂ ಪ್ರಿಯಕರನ ಮನೆ ಒಂದೇ ಗ್ರಾಮದಲ್ಲಿದೆ. ಈ ಕುರಿತು ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಎರಡು ಕುಟುಂಬಗಳ ನಡುವೆ ಸಣ್ಣ ಘರ್ಷಣೆಯೂ ಕೂಡ ನಡೆದಿದೆ.