ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ.ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ.ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಇದನ್ನು ಕಣ್ಣಾರೆ ಕಂಡ ಅನೇಕ ಸಾಕ್ಷಿಗಳಿವೆ.ಇಂತಹ ಕಾರಣಿಕದ ಕ್ಷೇತ್ರದೊಳಗೆ ಕೊಡಮಣಿತ್ತಾಯ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20 ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರುಚೂರಾಗು ಹೊಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ದುಷ್ಕೃತ್ಯವನ್ನು ಮೆರೆದಿರುತ್ತಾರೆ.ಇದನ್ನು ಹಿಂದು ಜಾಗರಣ ವೇದಿಕೆ ಮತ್ತು ಸಮಸ್ತ ಹಿಂದೂ ಸಮಾಜ ತೀವೃವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಇಂತಹ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು ಯಾರೆಂಬುವುದನ್ನು ಅಲ್ಲಿನ ಕಾರಣಿಕ ದೈವಗಳಾದ ಕೊಡಮಣಿತ್ತಾಯ ಬ್ರಹ್ಮಬೈದೆರ್ಲು ಶೀಘ್ರವಾಗಿ ಸಾರ್ವಜನಿಕವಾಗಿ ತೋರಿಸಿ ಕೊಡಬೇಕು ಎಂದು ಸಮಸ್ತ ಹಿಂದು ಸಮಾಜದ ಪ್ರಾರ್ಥನೆ.ಹಾಗೂ ಈ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಅವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.
ಇಂತಹ ಘಟನೇ ಮುಂದುವರಿದರೇ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕಾರ್ಯಕ್ಕೆ ಹಿಂದೂ ಜಾಗರಣ ವೇದಿಕೆ ಸಿದ್ಧವಾಗಿದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.