ಪುತ್ತೂರು : ವ್ಯಕ್ತಿಯೋರ್ವರು ಮರದಿಂದ ಬಿದ್ದು ಮೃತಪಟ್ಟ ಘಟನೆ ಪೆರ್ಲಂಪಾಡಿ ಕೊಳ್ತಿಗೆ ಸಮೀಪ ನಡೆದಿದೆ.
ಪೆರ್ಲಂಪಾಡಿ ಕೊಳ್ತಿಗೆ ನಿವಾಸಿ ಪಿ ಜಯಂತ ಪೂಜಾರಿ ಮೃತರು.
ಜಯಂತ ಪೂಜಾರಿ ಅವರು ಮೂರ್ತೆದಾರಿಕೆ ಮಾಡುವ ವೇಳೆ ಆಯತಪ್ಪಿ ತಾಳೆ ಮರದಿಂದ ಬಿದ್ದು ಗಂಭೀರ ಗಾಯಗೊಂಡ ಹಿನ್ನೆಲೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರು ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.