Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

    ಹೃದಯಾಘಾತದಿಂದ ಯುವಕ ಮೃತ್ಯು..!!

    ಹೃದಯಾಘಾತದಿಂದ ಯುವಕ ಮೃತ್ಯು..!!

    ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!

    ಮಂಗಳೂರು: ಹೈವೋಲ್ಟೇಜ್‌ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ..!

    ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ..!

    ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ ₹3 ಲಕ್ಷ ದಂಡ..!

    ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!

    ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ : ಡಿ.26 ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ

November 19, 2023
in ಪುತ್ತೂರು
0
ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ : ಡಿ.26 ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಳಕೆಗೆ ಸಿಗುವಂತಹ ಭವನವನ್ನು ನಿರ್ಮಾಣ ಮಾಡುವ ಕನಸು ನನಸಾಗುತ್ತಿದೆ. ಇಂತಹ ಭವನದ ಶಂಕುಸ್ಥಾಪನೆಗೆ ಇನ್ನು ಕೇವಲ 1 ತಿಂಗಳು ಮಾತ್ರ ಇರುವುದು. ಈ ಸಣ್ಣ ಅವಧಿಯಲ್ಲಿ ಸೂಕ್ತ ಕಾರ್ಯಯೋಜನೆ ಸಿದ್ಧಪಡಿಸಿ, ಎಲ್ಲರೂ ಒಂದಾಗಿ ಜಾರಿಗೊಳಿಸಿದರೆ ಯಶಸ್ಸು ಖಂಡಿತಾ ಎಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಹೇಳಿದರು.

Advertisement
Advertisement

Advertisement

Advertisement

ಕಡಬ ವಲಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸುಸಜ್ಜಿತ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಕನಿ ಸೇರಿದಂತೆ 1200 ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಸಮುದಾಯ ಭವನ ಹೊಸ್ಮಠ ಸೇತುವೆಯ ಸಮೀಪದಲ್ಲೇ ತಲೆಎತ್ತಲಿದೆ. 2023ರ ಡಿಸೆಂಬರ್ 26ರಂದು ಶಂಕುಸ್ಥಾಪನೆ ನಡೆಯಲಿದ್ದು, 2024ರ ಡಿಸೆಂಬರ್ ಹೊತ್ತಿಗೆ ಅಂದರೆ ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ಭವನ ನಿರ್ಮಾಣ ಕಾರ್ಯ ಪೂರ್ತಿ ಆಗಬೇಕಾಗಿದೆ. ಈ ಭವನ ನಿರ್ಮಾಣಕ್ಕಾಗಿ ಈಗಾಗಲೇ 130 ಮಂದಿ 1 ಲಕ್ಷ ರೂ.ನಂತೆ ನೀಡಿದ್ದು, 1.30 ಕೋಟಿ ರೂ. ಸಂಗ್ರಹವಾಗಿದೆ. ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನಕ್ಕೆ ಇನ್ನಷ್ಟು ಧನ ಸಂಗ್ರಹದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಂಕುಸ್ಥಾಪನಾ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಬೇಕು ಎನ್ನುವ ಯೋಜನೆ ಸಿದ್ಧಪಡಿಸಿಕೊಂಡಿದ್ದೇವೆ ಎಂದರು.

ಶಂಕುಸ್ಥಾಪನಾ ಸಮಾರಂಭದ ದಿನ ವಾಹನ ಜಾಥಾ ನಡೆಸಲು ಉದ್ದೇಶಿಸಲಾಗಿದೆ. ಜಾಥಾದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ತಬ್ಧಚಿತ್ರ ಇರಲಿದೆ. ಕಾಲಾವಕಾಶದ ಮಿತಿಯಲ್ಲೂ ಆ ದಿನ ಎಲ್ಲರೂ ತಮ್ಮ ಮನೆಗಳಲ್ಲಿರುವ ಒಂದು ವಾಹನವನ್ನಾದರೂ ಜಾಥಾದಲ್ಲಿ ಜೋಡಿಸಿಕೊಳ್ಳಬೇಕು. ಸಮುದಾಯದ ಶಕ್ತಿಯನ್ನು ಅನಾವರಣ ಮಾಡಬೇಕಾಗಿದೆ. ರಾಜ್ಯ ನಾಯಕರುಗಳಾದ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಅಶ್ವತ್ಥ ನಾರಾಯಣ್, ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಜಗ್ಗೇಶ್, ಸಂಜೀವ ಮಠಂದೂರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಇದರೊಂದಿಗೆ ಸಮುದಾಯ ಜಾತಿ ಗಣತಿಯನ್ನು ನಡೆಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸಮುದಾಯದ ಪ್ರತಿಯೋರ್ವ ವ್ಯಕ್ತಿಯ ಗಣತಿಯೂ ಆಗಬೇಕು. ಶಂಕುಸ್ಥಾಪನೆಗೆ ಮೊದಲು ಶೇ. 25ರಷ್ಟು ಧನ ಸಂಗ್ರಹ ಆಗಬೇಕಾಗಿದೆ. ಮುಂದಿನ ಧನಸಂಗ್ರಹಕ್ಕೆ ಈ ಜಾತಿಗಣತಿಯೂ ಪೂರಕವಾಗಿರಲಿದೆ ಎಂದರು.

ಕಡಬ ಸ್ಪಂದನಾ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಕೇಶವ ಅಮೈ ಮಾತನಾಡಿ, ಈಗಾಗಲೇ 15 ಮಂದಿ ಪ್ರವರ್ತಕರು ಸಹಕಾರಿ ಸಂಘದ ಕಾರ್ಯದಲ್ಲಿ ಕೈ ಜೋಡಿಸಿಕೊಂಡಿದ್ದೇವೆ. 1000ಕ್ಕೂ ಮಿಕ್ಕಿ ಶೇರುಗಳ ಸಂಗ್ರಹ ಆಗಬೇಕಾಗಿದೆ. ಓರ್ವ ಸದಸ್ಯ ಶೇರು ಸೇರಿದಂತೆ ಒಟ್ಟು 1150 ರೂ. ನೀಡಬೇಕಾಗಿದೆ. ಹೀಗೆ 1000 ಶೇರುಗಳಾದಾಗ ಮಾತ್ರ ಸಹಕಾರಿ ಸಂಘಕ್ಕೆ ಅನುಮತಿ ಸಿಗಲಿದೆ. ಈ ನಿಟ್ಟಿನಲ್ಲಿ ಗ್ರಾಮದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ವಲಯ ಉಪಾಧ್ಯಕ್ಷರು ಸಹಕರಿಸಬೇಕು. ಮುಂದಿನ 1 ವಾರದ ಅವಧಿಯಲ್ಲಿ ಸದಸ್ಯತ್ವ ಭರ್ತಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿಕೊಂಡರು.

ಹೊರೆಕಾಣಿಕೆ ಬಗ್ಗೆ ವಿವರಿಸಿದ ಪ್ರವೀಣ್ ಕುಂಟ್ಯಾನ, ಡಿ. 24ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಗಣಪತಿ ದೇವಸ್ಥಾನದ ಬಳಿ ಎಲ್ಲಾ ಗ್ರಾಮದವರು ಸೇರಬೇಕು. 3 ಗಂಟೆ ವೇಳೆಗೆ ಹೊರೆಕಾಣಿಕೆ ಹೊರಡಬೇಕು. 4 ಗಂಟೆ ವೇಳೆಗೆ ಶಂಕುಸ್ಥಾಪನೆ ನಡೆಯುವ ಸ್ಥಳಕ್ಕೆ ತಲುಪಬೇಕು. ಹಾಗಾಗಿ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸಬೇಕು. ಪ್ರತಿ ಮನೆಯಿಂದ ಕನಿಷ್ಠ 1 ಗೊನೆ ಅಡಕೆಯನ್ನಾದರೂ ನೀಡಬೇಕು. 10 ಸಾವಿರಕ್ಕೆ ಮಿಕ್ಕಿ ಅಡಕೆ ಗೊನೆ ಸಂಗ್ರಹ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಇದರ ಜೊತೆ ತೆಂಗಿನಕಾಯಿಯನ್ನು ನೀಡಬೇಕು. ಗ್ರಾಮ ಪ್ರಮುಖರು ಪ್ರತಿ ಮನೆಗೆ ಭೇಟಿ ನೀಡಿ ಹೊರೆಕಾಣಿಕೆಯ ಯಶಸ್ಸಿಗೆ ಶ್ರಮಿಸುವಂತೆ ಕರೆ ನೀಡಿದರು.

ಸಂಘಟನಾ ಕಾರ್ಯದರ್ಶಿ ಶಿವರಾಮ ಏನೇಕಲ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗಾಗಿ ಮಹಿಳಾ ಹಾಗೂ ತರುಣ ಗ್ರಾಮ ಸಮಿತಿಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಶುಚಿತ್ವ, ನೀರು, ಮಾಧ್ಯಮ, ಸಭಾ ಕಾರ್ಯಕ್ರಮ ನಿರ್ವಹಣೆ, ಸನ್ಮಾನ, ವೈದ್ಯಕೀಯ, ಆಸನ ವ್ಯವಸ್ಥೆ, ಹೊರೆಕಾಣಿಕೆ ಹೀಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.

ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಎಸ್. ಗೌರವಾಧ್ಯಕ್ಷ, ನಿವೃತ್ತ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಗೌಡ, ವಲಯ ಪೂರ್ವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಸ್ಪಂದನಾ ಸಹಕಾರಿ ಸಂಘದ ನಿರ್ದೇಶಕಿ ಆಶಾ ತಿಮ್ಮಪ್ಪ, ವಲಯ ಮಹಿಳಾ ಅಧ್ಯಕ್ಷೆ ನೀಲಾವತಿ ಶಿವರಾಂ, ಉಪಾಧ್ಯಕ್ಷರಾದ ಓಡ್ಯಪ್ಪ ಗೌಡ ಎರ್ಮಾಯಿಲ್, ರಾಧಾಕೃಷ್ಣ ಗೌಡ ಕೆರ್ನಡ್ಕ, ಗೋಪಾಲಕೃಷ್ಣ ಪಟೇಲ್, ವೆಂಕಟ್ ರಾಜ್ ಕೋಡಿಬೈಲು, ದಯಾನಂದ ಆಲಂಕಾರು, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ಕೊಳ್ಳೆಸಾಗು, ತರುಣ ಘಟಕದ ಅಧ್ಯಕ್ಷ ಪೂರ್ಣೇಶ್ ಮೊದಲಾದವರು ಉಪಸ್ಥಿತರಿದ್ದರು.

ನಿಕಟಪೂರ್ವಾಧ್ಯಕ್ಷ ತಮ್ಮಯ್ಯ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ ವಂದಿಸಿದರು. ವಾಸುದೇವ ಗೌಡ ಕಾರ್ಯಕ್ರಮ ನಿರೂಪಿಸಿದರು.

Previous Post

ಉಪ್ಪಿನಂಗಡಿ : ಅಪರಿಚಿತ ವಾಹನ ಡಿಕ್ಕಿ : ಆಂಧ್ರಪ್ರದೇಶ ಮೂಲದ ವ್ಯಕ್ತಿ ಮೃತ್ಯು..!!!

Next Post

ವಿಟ್ಲ : ಆಕ್ಟಿವಾ ಹಾಗೂ ಕಾರಿನ ನಡುವೆ ಡಿಕ್ಕಿ : ದ್ವಿಚಕ್ರ ವಾಹನ ಸವಾರೆಗೆ ಗಾಯ

OtherNews

ಹೃದಯಾಘಾತದಿಂದ ಯುವಕ ಮೃತ್ಯು..!!
Featured

ಹೃದಯಾಘಾತದಿಂದ ಯುವಕ ಮೃತ್ಯು..!!

September 23, 2026
ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ..!
ಕ್ರೈಮ್

ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ತಲಾ ₹3 ಲಕ್ಷ ದಂಡ..!

September 22, 2026
ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!
ಪುತ್ತೂರು

ಭಾರತೀಯ ಜನತಾ ಪಕ್ಷ ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ಸೇವಾ ಸಂಕಲ್ಪ ಯೋಜನೆ..!

September 21, 2026
ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ..!
Featured

ಕಾರ್ತಿಕ್ ಮೆರ್ಲ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತು; ನಾಳೆ ಶಿಕ್ಷೆ ಪ್ರಮಾಣ ಪ್ರಕಟ..!

September 21, 2026
(ಅ.17/18) : ಟೀಮ್ ಅಘೋರ ಉಬಾರ್ (ರಿ.) ತಂಡದ 2 ನೇ ವರ್ಷದ ಪಿಲಿಪಜ್ಜ ಕಾರ್ಯಕ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ

(ಅ.17/18) : ಟೀಮ್ ಅಘೋರ ಉಬಾರ್ (ರಿ.) ತಂಡದ 2 ನೇ ವರ್ಷದ ಪಿಲಿಪಜ್ಜ ಕಾರ್ಯಕ್ರಮ : ಆಮಂತ್ರಣ ಪತ್ರಿಕೆ ಬಿಡುಗಡೆ..!

September 21, 2026
ಉಪ್ಪಿನಂಗಡಿ : ಮಕ್ಕಳನ್ನು ಬಾವಿಗೆಸೆದ ಪ್ರಕರಣ : ಕೊಲೆ ಆರೋಪಿ ಮಹಿಳೆಗೆ ನ್ಯಾಯಾಂಗ ಬಂಧನ..!
Featured

ಉಪ್ಪಿನಂಗಡಿ : ಮಕ್ಕಳನ್ನು ಬಾವಿಗೆಸೆದ ಪ್ರಕರಣ : ಕೊಲೆ ಆರೋಪಿ ಮಹಿಳೆಗೆ ನ್ಯಾಯಾಂಗ ಬಂಧನ..!

September 21, 2026

Leave a Reply Cancel reply

Your email address will not be published. Required fields are marked *

Recent News

ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ : ಪುತ್ತೂರು ನಗರಸಭೆಗೆ 6.5 ಕೋಟಿ , ವಿಟ್ಲ ಪ.ಪಂ ಗೆ 3.5 ಕೋಟಿ; ಶಾಸಕ ಅಶೋಕ್ ರೈ..!

September 23, 2026
ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

ಚಾರ್ ಧಾಮ್ ಯಾತ್ರೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು..!

September 23, 2026
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್…!

ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್…!

September 23, 2026
ಸತತ 3 ದಿನ ಬ್ಯಾಂಕ್ ಮುಷ್ಕರ – ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಬ್ಯಾಂಕ್ ಓಪನ್

ಸತತ 3 ದಿನ ಬ್ಯಾಂಕ್ ಮುಷ್ಕರ – ಗ್ರಾಹಕರ ಅನುಕೂಲಕ್ಕಾಗಿ ಭಾನುವಾರ ಬ್ಯಾಂಕ್ ಓಪನ್

September 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.