ಉಪ್ಪಿನಂಗಡಿ: ಪುರುಷರ ಫ್ಯಾಷನ್ ಮತ್ತು ಉಡುಪುಗಳಿಗಾಗಿ ನೂತನವಾಗಿ ಆರಂಭಗೊಳ್ಳುತ್ತಿರುವ ಎಸ್.ಎಂ. ಮೆನ್ಸ್ ವೇರ್ ಸಂಸ್ಥೆಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಆ.20ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಸಮೀಪದ ರಾಮ್ ಗೋಪಾಲ್ ಕಾಂಪ್ಲೆಕ್ಸ್‌ನಲ್ಲಿ ನೂತನ ಮಳಿಗೆ ಆರಂಭಗೊಳ್ಳಲಿದ್ದು, ಪುರುಷರ ವಿವಿಧ ವಿನ್ಯಾಸದ ಉಡುಪುಗಳು, ಶರ್ಟ್‌ಗಳು, ಪ್ಯಾಂಟ್‌ಗಳು ಸೇರಿದಂತೆ ಫ್ಯಾಷನ್‌ಗೆ ತಕ್ಕ ಹಲವು ಆಯ್ಕೆಗಳು ಲಭ್ಯವಾಗಲಿವೆ.
ಗ್ರ್ಯಾಂಡ್ ಓಪನಿಂಗ್ ಅಂಗವಾಗಿ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳು ಮತ್ತು ಆಕರ್ಷಕ ಬೆಲೆಗಳಲ್ಲಿ ಉಡುಪುಗಳನ್ನು ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ.
ಪುರುಷರ ಉಡುಪು ಕ್ಷೇತ್ರದಲ್ಲಿ ಹೊಸ ಅನುಭವ ನೀಡುವ ಉದ್ದೇಶದೊಂದಿಗೆ ಆರಂಭಗೊಳ್ಳುತ್ತಿರುವ ಎಸ್.ಎಂ. ಮೆನ್ಸ್ ವೇರ್ ಗೆ ಗ್ರಾಹಕರು ಹಾಗೂ ಸಾರ್ವಜನಿಕರು ಆಗಮಿಸಿ ಶುಭ ಹಾರೈಸುವಂತೆ ಸಂಸ್ಥೆಯ ಪರವಾಗಿ ಮನವಿ ಮಾಡಲಾಗಿದೆ.



























