ವಿಟ್ಲ: ಪಿಕಪ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿಲ ಮುರುವ ತಿರುವಿನಲ್ಲಿ ನಡೆದಿದೆ.
ಘಟನೆ ಪರಿಣಾಮ ಆಕ್ಟಿವಾ ಸವಾರೆ ಮತ್ತು ಸಹಸವಾರೆ ಗಂಭೀರ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪಿಕಪ್ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಾಯಗೊಂಡವರನ್ನು ಮಾಣಿಲ ನಿವಾಸಿಗಳಾದ ಮನ್ವಿತಾ ಮತ್ತು ಕಾವ್ಯಶ್ರೀ ಎಂದು ಗುರುತಿಸಲಾಗಿದ್ದು ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



























