Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

    ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

    ವಿಟ್ಲ: ಕೋಳಿ ಅಂಕದ ಜೂಜಾಟಕ್ಕೆ ಪೊಲೀಸ್ ದಾಳಿ: ಮೂವರು ವಶಕ್ಕೆ..!!

    ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

    ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

    ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

    ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

    ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

    ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

    ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

    ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಉಪ್ಪಿ ಚಿತ್ರದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ಸಖತ್ ವೈರಲ್​​ : ಈ ಹಾಡು ಟ್ರೆಂಡ್​ ಆಗಿದ್ಹೇಗೆ..!??

February 3, 2024
in ರಾಜ್ಯ, ಸಿನಿಮಾ
0
ಉಪ್ಪಿ ಚಿತ್ರದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ಸಖತ್ ವೈರಲ್​​ :  ಈ ಹಾಡು ಟ್ರೆಂಡ್​ ಆಗಿದ್ಹೇಗೆ..!??
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ ಯಾವಾಗ? ಯಾರು? ಯಾವುದು? ಹೇಗೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಈಗಿನ ಟ್ರೆಂಡಿಂಗ್​ ಜಮಾನದಲ್ಲಿ ಯಾವುದಾದರೂ ಒಂದು ಸಾಂಗ್, ಡೈಲಾಗ್ ಅಥವಾ ವಿಡಿಯೋ ಏನಾದರೂ ಕ್ಲಿಕ್ ಆಯ್ತು ಅಂದ್ರೆ ಮುಗಿದೇ ಹೋಯ್ತು. ಬೆಳಗಿನಿಂದ ರಾತ್ರಿ ಮಲಗೋವರೆಗೂ ಅದೇ ಸೌಂಡು ಗುಂಯ್​ಗುಟ್ತಾ ಇರುತ್ತೆ. ಹೌದು, ಅದೇ ಸಾಲಿಗೆ ಈ ಹಾಡು ಸೇರಲಿದೆ. ಅದುವೇ ಓ ನಲ್ಲಾ.. ನೀ ನಲ್ಲಾ.. ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ-ನಲ್ಲ.

Advertisement
Advertisement
Advertisement

ರಿಸೆಂಟ್​ ಆಗಿ ಮೋದಿ ಸಾಂಗ್ಸ್​ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೋದಿ ಧ್ವನಿಯಲ್ಲಿ ಇರೋ ಬರೋ ಹಾಡುಗಳನ್ನ ಹಾಡಿಸಿಬಿಟ್ಟಿದ್ರು. ಲವ್ ಸಾಂಗ್ಸ್, ಪ್ಯಾಥೋ ಸಾಂಗ್ಸ್​, ಎಮೋಷನಲ್ ಸಾಂಗ್ಸ್​ ಹೀಗೆ ಎಲ್ಲ ತರಹದ ಹಾಡುಗಳನ್ನ ಮೋದಿ ವಾಯ್ಸ್​ನಲ್ಲಿ ಕೇಳಿ ಖುಷಿ ಪಟ್ಟಿದ್ದರು. ಸದ್ಯದವರೆಗೂ ಎಲ್ಲ ಕಡೆ ಮೋದಿ ಸಾಂಗ್ಸೇ ಟ್ರೆಂಡ್​ನಲ್ಲಿತ್ತು. ಆದ್ರೀಗ ಮೋದಿ ಸಾಂಗ್ಸ್​ನ ಓವರ್​ಟೇಕ್ ಮಾಡಿ ಸೋಶಿಯಲ್ ಮೀಡಿಯಾ ರೂಲ್ ಮಾಡ್ತಿರೋ ಹೊಸ ಸಾಂಗ್ ಬಂದಿದೆ. ಅದೇ​ ಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನಿನಲ್ಲ. ಈ ಸಾಂಗ್ ಯಾಕೆ ವೈರಲ್ ಆಯ್ತು ಅನ್ನೋದಕ್ಕೆ ಸದ್ಯಕ್ಕೆ ನಮ್ ಹತ್ರಾ​ ಉತ್ತರ ಇಲ್ಲ. ಯಾಕಂದ್ರೆ ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ. ಯಾವಾಗ, ಹೇಗೆ, ಯಾಕೆ ವೈರಲ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಆದರೆ ಒಂದ್ ಸಲ ಕ್ಲಿಕ್ ಆಯ್ತು ಅಂದ್ರೆ ಮತ್ತೆ ಅದನ್ನ ನಿಲ್ಲಿಸೋಕೆ ಇನ್ನೊಂದು ವೈರಲ್ ಕಂಟೆಂಟ್ಟೇ ಬರಬೇಕು.

ಆ ವೈರಲ್ ಕಂಟೆಂಟ್​ ಬರೋವರೆಗೂ ಈ ಕರಿಮಣಿ ಮಾಲೀಕನ ಮ್ಯಾಜಿಕ್ ನಿಲ್ಲೋದಿಲ್ಲ ಅನಿಸುತ್ತೆ. ಕನ್ನಡ ಸಿನಿಮಾಗಳನ್ನ ನೋಡೋರಿಗೆ, ಫಾಲೋ ಮಾಡೋರಿಗೆ ಇದು ಯಾವ ಚಿತ್ರದ ಸಾಂಗ್ ಅಂತ ಗೊತ್ತಿದೆ. ಇನ್ನು ಕೆಲವರಿಗೆ ಈ ಸಾಲುಗಳನ್ನ ಎಲ್ಲೋ ಕೇಳಿದಾಗೆ ಇದ್ಯಾಲ್ವ ಅಂತ ಅನಿಸಿದರೂ ಯಾವ ಸಿನಿಮಾದ ಅಂತ ಗೊತ್ತಾಗಿರಲಿಲ್ಲ. ಹಾಗಾಗಿ ಈ ಹಾಡು ಯಾವ ಚಿತ್ರದ್ದೂ ಅಂತ ಹುಡುಕಿ ಹುಡುಕಿ ಸರ್ಚ್ ಇಂಜಿನ್​ನಲ್ಲಿ ಕರಿಮಣಿ ಮಾಲೀಕ ಇನ್ನಷ್ಟು ಟ್ರೆಂಡ್​ ಗಟ್ಟಿಯಾಗಿ ಕೂತುಬಿಟ್ಟಿದ್ದಾನೆ. ಕೇಳುಗರ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದ್ದಾನೆ.

Advertisement

View this post on Instagram

A post shared by Rãvì Càdbûry🍫 (@ravi_cadbury)

ಸರ್ಪ್ರೈಸ್​ ಏನಪ್ಪಾ ಅಂದ್ರೆ ಈ ಸಾಲುಗಳ ಒಳ ಅರ್ಥ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ. ಆದರೂ ಟ್ರೆಂಡ್​ ಆಗ್ತಿದೆ. ರೀಲ್ಸ್​ ಆಗ್ತಿದೆ ಅನ್ನೋ ಕಾರಣಕ್ಕೆ ಸಿಕ್ಕ ಸಿಕ್ಕವರೆಲ್ಲಾ ನಮ್ದೂ ಒಂದು ಇರಲಿ ಅಂತ ಮಾಡುತ್ತಾ ಇದ್ದಾರೆ. ಅದರಲ್ಲೂ ಯುವ ಸಮೂಹವಂತೂ ತಮ್ಮ ಮನಸಿನೊಳಗಿನ ಭಾವನೆಯನ್ನ ತಮ್ಮ ಗೆಳೆಯ, ಗೆಳತಿಯರಿಗೆ ತಲುಪಿಸೋಕೆ ಸದ್ಯ ಇದೇ ಸಾಂಗ್​ನ್ನ ಬಳಸ್ತಿರೋದು ಸ್ಪೆಷಲ್. ಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನೀನಲ್ಲ.. ಈ ಸಾಲುಗಳಲ್ಲಿ ಎರಡು ಅರ್ಥ ಇದೆ. ಒಂದು ಕರಿಮಣಿ ಮಾಲೀಕ ನೀನಲ್ಲ ಅಂದ್ರೆ, ನನ್ನ ಗಂಡ ನೀನು ಅಲ್ಲ ಅಂತ. ಮತ್ತೊಂದು ಅರ್ಥದಲ್ಲಿ ನನ್ನ ಕುತ್ತಿಗೆಗೆ ಬೀಳುವ ಕರಿಮಣಿಗೆ ಮಾಲೀಕ ನೀನೇ ನಲ್ಲ ಅನ್ನೋ ಅರ್ಥವೂ ಇದೇ.

ಆದರೆ ಸದ್ಯದ ಆ್ಯಂಗಲ್ ಮಾತ್ರ ಕರಿಮಣಿ ಮಾಲೀಕ ನೀ ಅಲ್ಲ ಅನ್ನೋ ಆ್ಯಂಗಲ್​ನಲ್ಲೇ ಹೆಚ್ಚು ರೀಲ್ಸ್​ ಆಗ್ತಿದೆ. ಅಂದ್ಹಾಗೆ, ಇದು ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಉಪೇಂದ್ರ ಚಿತ್ರದ ಸೂಪರ್​ ಹಿಟ್ ಗೀತೆ. ‘ಏನಿಲ್ಲಾ ಏನಿಲ್ಲಾ ನನ್ನ ನಿನ್ನ ನಡುವೆ ಏನಿಲ್ಲಾ’ ಹಾಡಿನಲ್ಲಿ ಬರೋ ಸಾಲುಗಳಿವು. ಸ್ವತಃ ಉಪೇಂದ್ರ ಅವರೇ ಈ ಹಾಡಿಗೆ ಗೀತೆ ರಚಿಸಿದ್ದರು. ಗುರುಕಿರಣ್ ಮ್ಯೂಸಿಕ್ ಕಂಪೋಸ್ ಮಾಡಿ ಪ್ರತಿಮಾ ರಾವ್ ಈ ಹಾಡನ್ನ ಹಾಡಿದ್ದರು. ಈ ಸಾಂಗ್ ಬಂದು ಆಲ್​ಮೋಸ್ಟ್​ 25 ವರ್ಷ ಆಗಿದೆ. ಇದೀಗ 25 ವರ್ಷದ ನಂತರ ಈ ಹಾಡಿನ ಸಾಲುಗಳು ಈ ಲೆವೆಲ್​ಗೆ ವೈರಲ್ ಆಗಿರೋದು ನಿಜಕ್ಕೂ ಸರ್ಪ್ರೈಸ್​.

View this post on Instagram

A post shared by @kanakakk55

25 ವರ್ಷದ ಹಿಂದೆ ಉಪ್ಪಿ ಮತ್ತು ಗುರುಕಿರಣ್ ಸೇರಿ ಈ ಬ್ಯೂಟಿಫುಲ್ ಹಾಡನ್ನ ಸೃಷ್ಟಿಸಿದ್ರು. ಆದ್ರೆ 25 ವರ್ಷದ ನಂತರ ಈ ಹಾಡು ಇಷ್ಟು ದೊಡ್ಡ ಕ್ರೇಜ್ ಸೃಷ್ಟಿಸೋಕೆ ಕಾರಣ ಕನಕ. ಉತ್ತರ ಕರ್ನಾಟಕದ ಈ ಪ್ರತಿಭೆ ಇಂತಹದೊಂದು ಕಲ್ಪನೆ ಮಾಡಿ ತನ್ನದೇ ಸ್ಟೈಲ್​ನಲ್ಲಿ ಒಂದು ಝಲಕ್​ ಅಪ್​ಲೌಡ್​ ಮಾಡಿದ್ದ. ಇದು ನೋಡಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆ ವೈರಸ್ ಥರಾ ಅಂಟ್ಕೊಂಡು ಹೋಗ್ತಿದೆ. ಒಬ್ಬರಿಂದ ಒಬ್ಬರಿಗೆ ಒಬ್ಬರಿಂದ ಒಬ್ಬರಿಗೆ ಕರಿಮಣಿ ಮಾಲೀಕನ ಫೀವರ್​ ಹಬ್ಬಿದೆ.

ಈ ವೈರಲ್​ ಸ್ಟೋರಿಯಲ್ಲಿ ಮತ್ತೊಂದು ಸ್ಪೆಷಲ್ ಏನ್ ಗೊತ್ತಾ? ಒಂದು ಹಂತದವರೆಗೂ ತುಂಬಾ ಸಾಫ್ಟ್​ ಆಗಿ ಟ್ರೆಂಡ್ ಆಗ್ತಿದ್ದ ಕರಿಮಣಿ ಸಾಂಗ್, ಈಗ ಟಪ್ಪಾಂಗುಚ್ಚಿ ಫಾರ್ಮೆಟ್​ಗೆ ಕನ್ವರ್ಟ್ ಆಗಿದೆ. ಅದೇ ಸಾಲುಗಳಿಗೆ ಡಿಜೆ ಬೀಟ್ಸ್​ ಸೇರಿ ಇದರ ಸ್ವರೂಪ ಇನ್ನೊಂದು ಲೆವಲ್​ಗೆ ರೀಚ್ ಆಗ್ತಿದೆ. ಒಂಥರಾ ಇದು ಸೆಕೆಂಡ್​ ವರ್ಷನ್​ ಇದ್ದಂಗೆ.

ಎಲ್ಲದಕ್ಕೂ ಒಂದು ಲಿಮಿಟ್​ ಅಂತಾ ಇರುತ್ತೆ. ಒಂದು ಸಂದರ್ಭ ಇರುತ್ತೆ. ಎಲ್ಲಿ ಅಂದ್ರೆ ಅಲ್ಲಿ ಒಂದೇ ಥರ ಇರಬಾರದು ಅಂತಾರೆ. ಅದ್ರೆ ಕರಿಮಣಿ ಟ್ರೆಂಡ್​ ಹೇಗಿದೆ ಅಂದ್ರೆ ತುಂಬಾ ಸಿರೀಯಸ್​ ಸಿಚುವೇಷನ್​ನಲ್ಲೂ ಪ್ಲೇ ಆಗ್ತಿದೆ. ತುಂಬಾ ಫನ್ ಆಗಿರೋ ಟೈಮ್​ಲ್ಲೂ ಪ್ಲೇ ಆಗ್ತಿದೆ. ಮತ್ತೊಂದೆಡೆ ಇದರ ಕಾಮಿಡಿ ವರ್ಷನ್ನೂ ಈಗ ಟ್ರೆಂಡ್​ ಆಗ್ತಿರೋದು ಸಂಥಿಂಗ್ ಸ್ಪೆಷಲ್. ಅದೇನೇ ಇರಲಿ, ಸದ್ಯದ ರೀಲ್ಸ್​ ದುನಿಯಾ, ಇನ್​ಸ್ಟಾ ವರ್ಲ್ಡ್​ಗೆ ಕರಿಮಣಿ ಮಾಲೀಕ ನಿಜವಾದ ಮಾಲೀಕನಾಗಿದ್ದಾನೆ. ಈ ಕರಿಮಣಿ ಮಾಲೀಕನ ಓವರ್​ಟೇಕ್ ಮಾಡೋದ್ಯಾರು ಅನ್ನೋದೇ ಮುಂದಿನ ಕುತೂಹಲ.

Previous Post

‘ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ’ – ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

Next Post

ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ : ಮಹಿಳೆಯ ಚಿನ್ನದ ಸರ ಕಳವುಗೈದ ಆರೋಪಿಗಳು ವಶಕ್ಕೆ…!

OtherNews

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!
ರಾಜ್ಯ

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ..!!

June 14, 2026
Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು – ಕಣ್ಣೂರು ಡಿಐಜಿ ಸ್ಪಷ್ಟನೆ..!!

June 8, 2026
ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!
ನಿಧನ

ರಾಷ್ಟ್ರ ಪ್ರಶಸ್ತಿ ವಿಜೇತ ಖ್ಯಾತ ಮಲಯಾಳಂ ನಟ ಸಲೀಂ ಕುಮಾರ್ ಇನ್ನಿಲ್ಲ..!!

June 7, 2026
ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್..!!
ಸಿನಿಮಾ

ರಕ್ಷಿತ್ ಜನ್ಮದಿನಕ್ಕೆ ರಿಷಬ್ ಶೆಟ್ಟಿ ಕಡೆಯಿಂದ ದೊಡ್ಡ ಅಪ್​​ಡೇಟ್..!!

June 6, 2026
ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ..!!
ಸಿನಿಮಾ

ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ..!!

June 4, 2026
“ಬನ” ಪೋಸ್ಟರ್ ಸದ್ದು: ರೈ ಸ್ಟಾರ್ ಫೇಸ್ ರಿವೀಲ್ ಆಗುತ್ತಾ..?
ಸಿನಿಮಾ

“ಬನ” ಪೋಸ್ಟರ್ ಸದ್ದು: ರೈ ಸ್ಟಾರ್ ಫೇಸ್ ರಿವೀಲ್ ಆಗುತ್ತಾ..?

May 18, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

ಪುತ್ತೂರು: ರಸ್ತೆಗೆ ಮಣ್ಣು ಹಾಕಿದ ವಿಚಾರಕ್ಕೆ ಗಲಾಟೆ: ಇತ್ತಂಡಗಳ ದೂರು, ಪ್ರಕರಣ ದಾಖಲು..!!

June 15, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

ವಿಟ್ಲ: ಕೋಳಿ ಅಂಕದ ಜೂಜಾಟಕ್ಕೆ ಪೊಲೀಸ್ ದಾಳಿ: ಮೂವರು ವಶಕ್ಕೆ..!!

June 15, 2026
ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

June 14, 2026
ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

June 14, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.