ವಿಟ್ಲ : ವ್ಯಕ್ತಿಯೋರ್ವರನ್ನು ತಡೆಗಟ್ಟಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ, ಚಿನ್ನದ ಸರ ಹಾಗೂ ಹಣವನ್ನು ಕಸಿದುಕೊಂಡು ತೆರಳಿರುತ್ತಾರೆ ಎಂದು ಆರೋಪಿಸಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಾಣಿ ನಿವಾಸಿ ಸ್ಟೀವನ್ ಆಲ್ವೀನ್ ಪಾಯಸ್ ನೀಡಿರುವ ದೂರಿನ ಮೇರೆಗೆ ಮಲ್ವಿನ್ ಕಿಶೋರ್ ಮಾರ್ಟಿಸ್ ಹಾಗೂ ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾ.5 ರಂದು ಬೆಳಗ್ಗೆ ಸ್ಟೀವನ್ ಆಲ್ವೀನ್ ಪಾಯಸ್ ಅವರ ಮೋಟಾರ್ ಸೈಕಲ್ ನಲ್ಲಿ ಕಛೇರಿಗೆ ತೆರಳುತ್ತಿದ್ದಾಗ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ಗೆ ತಲುಪಿದಾಗ, ಕಾರಿನಲ್ಲಿ ಬಂದ ಮಲ್ವಿನ್ ಕಿಶೋರ್ ಮಾರ್ಟಿಸ್ ಮತ್ತು ಅವರ ಪತ್ನಿ ಸ್ಟೀವನ್ ಆಲ್ವೀನ್ ಪಾಯಸ್ ರನ್ನು ತಡೆದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುತ್ತಾರೆ.
ಬಳಿಕ ಸ್ಟೀವನ್ ಆಲ್ವೀನ್ ಪಾಯಸ್ ಅವರ ಕುತ್ತಿಗೆಯಲ್ಲಿದ್ದ 5 ಪವನ್ ಚಿನ್ನದ ಸರ(ಇದರ ಅಂದಾಜು ಮೌಲ್ಯ 2 ಲಕ್ಷ ರೂ) ಮತ್ತು ಪರ್ಸ್ ನಲ್ಲಿದ್ದ 18,000/- ರೂ ಹಣವನ್ನು ಕಸಿದುಕೊಂಡು ಅವ್ಯಾಚವಾಗಿ ಬೈದು ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2024 ಕಲಂ: 341,355,323, 504, 506, 392 R/w 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























