ಕೋವಿಡ್ -19 ಹರಡುತ್ತಿರುವ ಹಿನ್ನೆಯಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣದಿಂದ ಬಡ ಕುಟುಂಬಗಳು ಸಂಕಷ್ಟದಲ್ಲಿದ್ದು, ಈ ಸಂದರ್ಭದಲ್ಲಿ ಸೇಡಿಯಾಪು ಮತ್ತು ದಾರಂದಕುಕ್ಕು ಪರಿಸರದಲ್ಲಿನ ಹಲವು ಬಡ ಕುಟುಂಬಗಳಿಗೆ ಉದ್ಯಮಿ,ರೈ ಎಸ್ಟೇಟ್ ಮಾಲಕರು ಹಾಗೂ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸಿದರು.
ಸುಮಾರು ಐವತ್ತೈದು ಬಡ ಕುಟುಂಬಗಳು ಪಾಲ್ಗೊಂಡಿದ್ದು, ಸೇಡಿಯಾಪು ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಜಯಪ್ರಕಾಶ್ ಬದಿನಾರು ಸ್ವಾಗತಿಸಿ, ನಿರಂಜನ ರೈ ಧನ್ಯವಾದ ಹೇಳಿದರು. ಲಿಂಗಪ್ಪ ,ಅಜಿತ್ ರವರು ಸಹಕರಿಸಿದರು.