ಹಾಸನ : ಶಾಂತಿಗ್ರಾಮದ ಬಳಿ ಗೂಡ್ಸ್ ರೈಲು ಹಳಿ ತಪ್ಪಿ ಅನಾಹುತ ಸಂಭವಿಸಿದೆ. ರೈಲು ಚಲಿಸುತ್ತಿರುವಾಗಲೇ ಹಳಿ ಮೇಲೆ ಗುಡ್ಡ ಕುಸಿದಿದ್ದರಿಂದ ಟ್ರೈನ್ ಹಳಿಯಿಂದ ಜಾರಿದೆ.
ಇಂದು ಮುಂಜಾನೆ ಟ್ರ್ಯಾಕ್ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಯಾವುದೇ ಸಾವು, ನೋವು ಸಂಭವಿಸಿಲ್ಲ.
ಕೊನೆಗೆ ರೈಲ್ವೇ ಸಿಬ್ಬಂದಿ ಟ್ರ್ಯಾಕ್ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಹಾಸನ ಬೆಂಗಳೂರು, ಬೆಂಗಳೂರು-ಹಾಸನ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆ ಆಗಿದೆ.