ಬೆಂಗಳೂರು: ವಾಲ್ಮೀಕಿ, ಮುಡಾ ಹಗರಣ ಖಂಡಿಸಿದ ಪಾದಯಾತ್ರೆ ಬಿಜೆಪಿ ಹಾಗೂ ಜೆಡಿಎಸ್ನಿಂದ ಪಾದಯಾತ್ರೆಗೆ ತೀರ್ಮಾನ ಮಾಡಲಾಗಿದೆ. ಇದೇ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ, ಮುಡಾ ಹಗರಣದ ವಿವಾರವಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತಾಡುತ್ತಿದ್ದರು. ಇದೇ ವೇಳೆ ಏಕಾಏಕಿ ಮೂಗಿನಿಂದ ರಕ್ತ ಬಂದಿದೆ. ಆ ಕೂಡಲೇ ಹೆಚ್.ಡಿ.ಕುಮಾರಸ್ವಾಮಿ ಅವರು ಕರ್ಚಿಫ್ನಿಂದ ಒರೆಸಿಕೊಂಡಿದ್ದಾರೆ. ಆದರೆ ಅಷ್ಟಕ್ಕೆ ನಿಲ್ಲದೆ ಅಧಿಕವಾಗಿ ರಕ್ತಸ್ರಾವ ಬಂದಿದೆ. ರಕ್ತಸ್ರಾವ ಹೆಚ್ಚಾದಂತೆ ಖಾಸಗಿ ಹೋಟೆಲ್ನಿಂದ ಕುಮಾರಸ್ವಾಮಿ ಅವರನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಅವರನ್ನು ಕಳುಹಿಸಿಕೊಡಲಾಗಿದೆ.