ಪುತ್ತೂರು : ಭಾರೀ ಮಳೆಯಿಂದಾಗಿ ಮನೆಯ ಬಾವಿಯೊಂದು ಕುಸಿದ ಘಟನೆ ಪುತ್ತೂರಿನ ಸಮೀಪದ ಬಪ್ಪಳಿಕೆಯಲ್ಲಿ ನಡೆದಿದೆ.
ಬಪ್ಪಳಿಗೆ ನಿವಾಸಿ ಬಾಲಕೃಷ್ಣ ನಾಯ್ಕ್ ಎಂಬವರಿಗೆ ಸೇರಿದ ಬಾವಿ ಕುಸಿದಿದ್ದು, ಭಾರೀ ಮಳೆಗೆ ಮಣ್ಣು ಸಡಿಲಗೊಂಡ ಹಿನ್ನಲೆ ಬಾವಿ ಹಠಾತ್ ಕುಸಿತಗೊಂಡಿದೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು, ನಗರಸಭೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡ ಮೋನು ಬಪ್ಪಳಿಗೆ, ಸ್ಥಳೀಯರು ಭೇಟಿ ನೀಡಿದ್ದಾರೆ.