ಪುತ್ತೂರು : ಭಾರೀ ಮಳೆಗೆ ಬರೆ ಕುಸಿದ ಘಟನೆ ಚಿಕ್ಕಮುಡ್ನೂರಿನ ಏಕ – ಕಾಯರ್ತಡಿ ರಸ್ತೆಯಲ್ಲಿ ಸಂಭವಿಸಿದೆ.
ಏಕ – ಕಾಯರ್ತಡಿ ರಸ್ತೆ ಸಮೀಪದ ಬರೆ ಕುಸಿದಿದ್ದು, ರಸ್ತೆ ಅಪಾಯದಂಚಿನಲ್ಲಿದೆ.
ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಬರೆ ಕುಸಿತ ಉಂಟಾಗುತ್ತಿದೆನ್ನಲಾಗಿದೆ.
ತಕ್ಷಣ ತಹಶೀಲ್ದಾರರು ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್. ಕೆಮ್ಮಾಯಿ ಆಗ್ರಹಿಸಿದ್ದಾರೆ.