ಬೆಳ್ತಂಗಡಿ : ಕರಾವಳಿಯ ದೇವಸ್ಥಾನಗಳಿಗೆ ಖ್ಯಾತ ನಟ ಯಶ್ ಇಂದು (ಜು.6) ಭೇಟಿ ನೀಡಿದ್ದಾರೆ.
ನಟ ಯಶ್ ಅವರು ಇಂದು ಧರ್ಮಸ್ಥಳಕ್ಕೆ ಹಾಗೂ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಕೆಲಸಗಳು ಶುರುವಾಗುವುದಕ್ಕೂ ಮೊದಲು ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇದರ ಜೊತೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ.
ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಹರಕೆ ತೀರಿಸಲು ದಂಪತಿ ಬಂದಿದ್ದರು ಎನ್ನಲಾಗಿದೆ. ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆಯನ್ನು ಯಶ್ ದಂಪತಿ ತೀರಿಸಿದ್ದಾರೆ. ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಯಶ್ ದಂಪತಿಗೆ ಸಾಥ್ ನೀಡಿದ್ದಾರೆ.