ಪುಂಜಾಲಕಟ್ಟೆ : ಯಕ್ಷಗಾನ ಹಾಸ್ಯ ಕಲಾವಿದ, ಚೆನ್ನೈತ್ತೋಡಿ ಗ್ರಾಮದ ಅಂದ್ರಳಿಕೆ, ಅಂತರಗುತ್ತು ನಿವಾಸಿ ಮುನಿರಾಜ ಚೌಟ ಅವರ ಪುತ್ರ ವಿಶಾಲ್ ಜೈನ್ (ವಿ.ಕೆ.ಜೈನ್) ವಾಮದಪದವು (47) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ವಿಶಾಲ್ ಜೈನ್ ರವರು ಬೆಂಕಿನಾಥೇಶ್ವರ ಮೇಳ, ಸಸಿಹಿತ್ಲು ಮೇಳ, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಬಪ್ಪನಾಡು ಮೇಳದ ಕಲಾವಿದರಾಗಿದ್ದರು. ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು.
ಮೃತರು ತಂದೆ, ತಾಯಿ, ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.