ಶಿವಮೊಗ್ಗ : ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಹಾಸ್ಟೆಲ್ಗೆ ಅರ್ಜಿ ಹಾಕಲು ಹೊರಟಿದ್ದ ಯುವಕ ಸಾವನ್ನಪ್ಪಿರೋ ಘಟನೆ ಸಾಗರ ತಾಲೂಕಿನ ಆವಿನಹಳ್ಳಿ ಬಳಿ ನಡೆದಿದೆ.
ಸಚಿನ್ (19) ಮೃತ ಬೈಕ್ ಸವಾರ.
ಸಾಗರ ನಗರದಿಂದ ಗೆಣಸಿನಕುಣಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಕಟ್ಟಿನಕಾರು ಸಮೀಪದ ಪಡಬೀಡು ಗ್ರಾಮದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಕಟ್ಟಿನಕಾರು ಗ್ರಾಮದ ಬೈಕ್ ಸವಾರ ಸಚಿನ್ ತೀವ್ರವಾಗಿ ಗಾಯಗೊಂಡಿದ್ದ. ಜೊತೆಗೆ ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಸ್ಥಳೀಯರು ಸಚಿನ್ನನ್ನು ಶಿವಮೊಗ್ಗ ಆಸ್ಪತ್ರೆ ರವಾನಿಸಿದ್ದಾರೆ. ಜೊತೆಗೆ ಮತ್ತೊಬ್ಬ ಸವಾರ ಸುಮಂತ್ ಕುಂದಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಚಿನ್ ಮೃತಪಟ್ಟಿದ್ದಾನೆ.
ಬೈಕ್ಗೆ ಡಿಕ್ಕಿ ಹೊಡೆದ ಟಿಪ್ಪರ್ ಗೆಣಸಿಕುಣಿಯ ಸಂಪೇಕೈ ಮಂಜು ಎನ್ನುವವರಿಗೆ ಸೇರಿದೆ. ಸಾಗರದಲ್ಲಿ ಟಿಪ್ಪರ್ ರಿಪೇರಿ ಮಾಡಿಸಿಕೊಂಡು ವಾಪಸ್ ಬರುತ್ತಿರುವಾಗ ಈ ಘಟನೆ ನಡೆದಿದೆ.
ಮೃತ ಯುವಕನು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿ ಪದವಿ ಪಡೆಯುವ ಕನಸ್ಸನ್ನು ಹೊತ್ತಿದ್ದನಂತೆ. ಹೀಗಾಗಿ ದ್ವೀಪದಿಂದ ಸಾಗರಕ್ಕೆ ಹೋಗಿ ಹಾಸ್ಟೆಲ್ ಅರ್ಜಿ ಹಾಕುವ ಖುಷಿಯಲ್ಲಿದ್ದ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ.