ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ, ವಾಹನ ಜಾಥಾ ಮತ್ತು ಸಭಾ ಕಾರ್ಯಕ್ರಮ ಆ.11 ರಂದು ಕಲ್ಲಡ್ಕ, ಗೇರುಕಟ್ಟೆ ಉಮಾಶಿವ ದೇವಸ್ಥಾನ ನಡೆಯಲಿದೆ.
ಆ.11 ರಂದು ಮಧ್ಯಾಹ್ನ 2.30ರಿಂದ ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಿಂದ, ಮೆಲ್ಕಾರು ರಾಮದೇವ ಸಭಾಭವನ, ವೀರಕಂಭ ಶಾರದ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನ ಜಾಥಾ ಹೊರಟು ಸಂಜೆ ಕಲ್ಲಡ್ಕ, ಗೇರುಕಟ್ಟೆ ಉಮಾಶಿವ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಘ ಸಂಚಾಲಕರಾದ ಯಶವಂತ ಮುಲ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ನಿವೃತ್ತ ಯೋಧ, ಭಾರತೀಯ ಭೂಸೇನೆಯ ಎ.ಸಿ.ಪಿ. ಹವಲ್ದಾರ್ ಜಯ ಕುಮಾರ್ ಕೆದಿಲ ಗೌರವ ಉಪಸ್ಥಿತಿವಹಿಸಲಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಪ್ರಜ್ಞಾ ಕಶ್ಯಪ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.