ಪುತ್ತೂರು : ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದಿರುವ ಘಟನೆಯನ್ನು ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ಇದು ರಾಜ್ಯ ಸರ್ಕಾರದ ವೈಫಲ್ಯ, ರಾಜ್ಯ ಕಾಂಗ್ರೆಸ್ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣವೇ ಇಂತಹ ಘಟನೆಗಳು ಮರುಕಳಿಸಲು ಮುಖ್ಯ ಕಾರಣವೆಂದಿದ್ದಾರೆ.
ಹಿಂದೂ ಸಮಾಜದ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸದಿರಿ. ಸ್ವಾರ್ಥ – ತುಷ್ಟೀಕರಣವನ್ನು ಕೈ ಬಿಟ್ಟು ಸಂವಿಧಾನ ಬದ್ಧರಾಗಿ ಸರ್ಕಾರ ನಡೆಸಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.