ಪುತ್ತೂರು: ಗೋಳಿತೊಟ್ಟು ನಿವಾಸಿ ಮಹಿಳೆಯೊಬ್ಬರು ಕೋವಿಡ್ನಿಂದಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗೋಳಿತ್ತೊಟ್ಟು ಶಾಂತಿನಗರ ನಿವಾಸಿ ಭದ್ರಪ್ಪ ಎಂಬವರ ಪತ್ನಿ ನೀಲಮ್ಮ(56ವ) ಎಂಬವರು ಮೃತಪಟ್ಟವರು. ಅವರು ಅನಾರೋಗ್ಯದಿಂದಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಜೂ.13ರಂದು ಮೃತಪಟ್ಟಿದ್ದಾರೆ.