ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ತಡೆಯಾಗಿದ್ದ ದೇವಳದ ಜಾಗದಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಮನೆ ನೆಲ ಸಮವಾಗಿದೆ.
ತಡ ರಾತ್ರಿ ನೆಲಸಮಗೊಳಿಸಿದ್ದು ಯಾರು ತೆರವು ಗೊಳಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ದೇವಳದ ಅಭಿವೃದ್ಧಿಗಾಗಿ ಕೆಲ ದಿನಗಳಿಂದ ದೇಗುಲದ ವತಿಯಿಂದ ಬಾಡಿಗೆಯಲ್ಲಿದ್ದ ತೆರವು ಕಾರ್ಯ ನಡೆದಿತ್ತು. ರಾಜೇಶ್ ಬನ್ನೂರು ಹಾಗೂ ವಕೀಲರೊಬ್ಬರ ಮನೆ ತೆರವಿಗೆ ಒಪ್ಪಿಗೆ ಸಿಕ್ಕಿರಲಿಲ್ಲ.
ಜೆಸಿಬಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಕೀಲರಿಗೆ ಸೇರಿದ ಮನೆಗೆ ಮರ ಬಿದ್ದು ಹಾನಿಯಾಗಿತ್ತು ಬಳಿಕ ಅದನ್ನು ತೆರವುಗೊಳಿಸಲಾಗಿತ್ತು ಈಗ ರಾಜೇಶ್ ಬನ್ನೂರಿಗೆ ಸೇರಿದ ಮನೆಯೂ ನೆಲಸಮವಾಗಿದೆ.
